ಮರಿಯಮ್ಮ, ಪೂಜೇಶ್ವರ ದೇವರ ರಥೋತ್ಸವ ಅದ್ದೂರಿ

ಕನಕಗಿರಿ ತಾಲೂಕಿನ ಚಿಕ್ಕಮಾದಿನಾಳ ಗ್ರಾಮದ ಮರಿಯಮ್ಮ, ಪೂಜೇಶ್ವರ ತಾತನವರ ಜಾತ್ರೆ ನಿಮಿತ್ತ ರಥೋತ್ಸವ ಸಂಭ್ರಮದಿಂದ ಜರುಗಿತು.
ಕನಕಗಿರಿ ತಾಲೂಕಿನ ಚಿಕ್ಕಮಾದಿನಾಳ ಗ್ರಾಮದ ಮರಿಯಮ್ಮ, ಪೂಜೇಶ್ವರ ತಾತನವರ ಜಾತ್ರೆ ನಿಮಿತ್ತ ರಥೋತ್ಸವ ಸಂಭ್ರಮದಿಂದ ಜರುಗಿತು.
Published on

ಪ್ರಮುಖ ಮುಖ್ಯಾಂಶಗಳು

  • ಜಾತ್ರೆ
  • ನಿಮಿತ್ತ
  • ರಥೋತ್ಸವ
ಕನಕಗಿರಿ: ತಾಲೂಕಿನ ಚಿಕ್ಕಮಾದಿನಾಳ ಗ್ರಾಮದ ಮರಿಯಮ್ಮ ದೇವಿ ಹಾಗೂ ಪೂಜೇಶ್ವರ ತಾತನವರ ಜಾತ್ರೆ ನಿಮಿತ್ತ ಭಾನುವಾರ ರಥೋತ್ಸವ ಅದ್ದೂರಿಯಾಗಿ ಜರುಗಿತು.
ಜಾತ್ರೆ ನಿಮಿತ್ತ ಬ್ರಾಹ್ಮಿ ಮುಹೂರ್ತದಲ್ಲಿ ಮರಿಯಮ್ಮ ದೇವಿ ಹಾಗೂ ಪೂಜೇಶ್ವರ ತಾತನವರಿಗೆ ಪಂಚಾಮೃತ ಅಭಿಷೇಕ, ಬಿಲ್ವಾರ್ಚನೆ ನಡೆಯಿತು. ಕರಡಿಗುಡ್ಡ ಭಕ್ತರಿಂದ ಹಾಲು ಹೋಕಳಿ ನಡೆಯಿತು. ರಥೋತ್ಸವಕ್ಕಾಗಿ ತಯಾರಿಸಿದ ಹಗ್ಗವನ್ನು ಜಾಲಿ ಹುಡಾ ಭಕ್ತರು ಮೆರವಣಿಗೆ ಮೂಲಕ ತಂದು ಅರ್ಪಿಸಿದರು. ರಾಮದುರ್ಗ ಭಕ್ತರು ತಂದಿದ್ದ ನಂದಿಕೋಲು, ನಾಗಲಾಪುರ ಗ್ರಾಮಸ್ಥರು ತಂದಿದ್ದ ರುದ್ರಾಕ್ಷಿ ಮಾಲೆಯನ್ನು ರಥಕ್ಕೆ ಅರ್ಪಿಸಲಾಯಿತು. ಹಿರೇಮಾದಿನಾಳ ಭಕ್ತರಿಂದ ಗೊಂಬೆ ಕುಣಿತ ನಡೆಯಿತು.
ಗ್ರಾಮದಲ್ಲಿ ಮೊದಲಬಾರಿಗೆ ರಥೋತ್ಸವ ಜರುಗುತ್ತಿದೆ. ಕನಕಗಿರಿ ಶ್ರೀ ಸುವರ್ಣಗಿರಿ ಸಂಸ್ಥಾನ ವಿರಕ್ತಮಠದ ಡಾ. ಚನ್ನಮಲ್ಲಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದ ಬಳಿಕ ಸಾವಿರಾರು ಭಕ್ತರ ಸಮ್ಮುಖದಲ್ಲಿ ಡೊಳ್ಳು, ಭಜನೆಗಳೊಂದಿಗೆ ರಥೋತ್ಸವ ನಡೆಯಿತು. ರಥೋತ್ಸವ ಸಂದರ್ಭದಲ್ಲಿ ಭಕ್ತರು ರಥಕ್ಕೆ ಉತ್ತತ್ತಿ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.
ಹೆಬ್ಬಾಳದ ಶ್ರೀ ನಾಗಭೂಷಣ ಶಿವಾಚಾರ್ಯರು, ಬೂದಗುಂಪಾ ಸಿದ್ಧೇಶ್ವರ ಸ್ವಾಮೀಜಿ, ತಾಪಂ ಮಾಜಿ ಅಧ್ಯಕ್ಷ ಬಸವಂತಗೌಡ, ಪ್ರಮುಖರಾದ ವೆಂಕಟೇಶ ತೀರ್ಥಬಾವಿ, ಬಸಪ್ಪ ಗಂಗನಾಳ, ನಾಗಪ್ಪ ತಿದಿ, ಈಶಪ್ಪ ವಡ್ರಕಲ್, ಬಸವರಾಜ ರಾಮದುರ್ಗ, ಪರಸಪ್ಪ ನರಿ, ಬಸವರಾಜ ಕಟ್ಟಿಮನಿ, ಮಲ್ಲಿಕಾರ್ಜುನ ಪಾಟೀಲ, ಲಕ್ಷ್ಮಣ ಕರೇಗೌಡ, ಶಂಕ್ರಗೌಡ ಹೊಸಮನಿ, ಬಸವರಾಜ ಗಣವರಿ, ವೆಂಕಟೇಶ ಉಪ್ಪಾರ, ಕಾಂತೆಪ್ಪ ವಾಲೆಕಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net