ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿಗೆ ನಾಂದಿ

ಮುನಿರಾಬಾದ್ ಸಮೀಪದ ಕಾಮನೂರು ಗ್ರಾಮದಲ್ಲಿ ಆಯೋಜಿಸಿದ್ದ ಡಿಜಿ ಪೇ ಅಭಿಯಾನಕ್ಕೆ ಕೊಪ್ಪಳ ಪ್ರಾದೇಶಿಕ ವಿಭಾಗದ ನಿರ್ದೇಶಕ ಜೆ.ಚಂದ್ರಶೇಖರ ಚಾಲನೆ ನೀಡಿದರು. ಸೇವಾ ಪ್ರತಿನಿಧಿಗಳು ಇದ್ದರು.
ಮುನಿರಾಬಾದ್ ಸಮೀಪದ ಕಾಮನೂರು ಗ್ರಾಮದಲ್ಲಿ ಆಯೋಜಿಸಿದ್ದ ಡಿಜಿ ಪೇ ಅಭಿಯಾನಕ್ಕೆ ಕೊಪ್ಪಳ ಪ್ರಾದೇಶಿಕ ವಿಭಾಗದ ನಿರ್ದೇಶಕ ಜೆ.ಚಂದ್ರಶೇಖರ ಚಾಲನೆ ನೀಡಿದರು. ಸೇವಾ ಪ್ರತಿನಿಧಿಗಳು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬ್ಯಾಂಕಿಂಗ್ ವ್ಯವಸ್ಥೆ

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿಗೆ ನಾಂದಿ

ಮುನಿರಾಬಾದ್: ಗ್ರಾಮೀಣ ಭಾಗದ ಜನರು ಹಣಕ್ಕಾಗಿ ನಗರದ ಎಟಿಎಂಗಳಿಗೆ ಅಲೆಯುವುದನ್ನು ತಪ್ಪಿಸಲು ಡಿಜಿ ಪೇ ವಿಶೇಷ ಸೌಲಭ್ಯ ಜಾರಿಗೊಳಿಸಲಾಗಿದೆ ಎಂದು ಕೊಪ್ಪಳ ಪ್ರಾದೇಶಿಕ ವಿಭಾಗದ ನಿರ್ದೇಶಕ ಜೆ.ಚಂದ್ರಶೇಖರ ತಿಳಿಸಿದರು.
ಸಮೀಪದ ಕಾಮನೂರು ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಡಿಜಿ ಪೇ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಹಳ್ಳಿ ಜನರ ಆರ್ಥಿಕ ಸಬಲೀಕರಣವೇ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಉದ್ದೇಶ.
ಯೋಜನೆಯ ಸಿಎಸ್‌ಸಿ ಕೇಂದ್ರಗಳ ಮೂಲಕ ಜನರಿಗೆ ಅನೇಕ ಸರ್ಕಾರಿ ಸೇವೆಗಳನ್ನು ತಲುಪಿಸಲಾಗುತ್ತಿದೆ. ಡಿಜಿ ಪೇ ಮೂಲಕ ನಗದು ವಿತರಣಾ ಸೇವೆ ಆರಂಭಿಸಿರುವುದು ಗ್ರಾಮೀಣ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದೆ ಎಂದರು.
ಗ್ರಾಪಂ ಸದಸ್ಯ ಸಿದ್ದಣ್ಣ, ಮಾಜಿ ಅಧ್ಯಕ್ಷ ಮಹಾದೇವಪ್ಪ ಕುರಿ, ಮಾಜಿ ಸದಸ್ಯ ಯಲ್ಲಪ್ಪ, ತಾಲೂಕು ಕೃಷಿ ಅಧಿಕಾರಿ ವೀರೇಶ, ಸೇವಾ ಪ್ರತಿನಿಧಿಗಳಾದ ಕಮಲಾಕ್ಷಿ, ಪ್ರೇಮಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net