ಕನಕಗಿರಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸೇನಾ ಆಯ್ಕೆ ಪೂರ್ವ ತರಬೇತಿ ಕೇಂದ್ರದಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಯಿತು. ಮೇಲ್ವಿಚಾರಕ ಮಲ್ಲಯ್ಯ ಗೋಮರ್ಸಿ, ಕ್ಯಾಪ್ಟನ್ ಪುಂಡಪ್ಪ ಅಡವಳ್ಳಿ, ಮಾಜಿ ಸೈನಿಕರಾದ ರವಿ ದೇಸಾಯಿ, ರವಿ ತಾಳಿ, ಶಿಕ್ಷಕರಾದ ಕುಮಾರ್ ದಶರಥ ಹುಲಿಹೈದರ್, ವೆಂಕಟೇಶ, ಶಿವಲೀಲಾ ತೋಳದ, ವಿದ್ಯಾರ್ಥಿಗಳು ಇತರರಿದ್ದರು.
Published on:
Copied
Follow Us
ಕನಕಗಿರಿ: ಶತ್ರು ರಾಷ್ಟ್ರ ಪಾಕಿಸ್ತಾನದ ಸೈನಿಕರ ವಿರುದ್ಧ ಜೀವದ ಹಂಗು ತೊರೆದು ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಭಾರತೀಯ ವೀರ ಸೇನಾನಿಗಳ ಸಾಹಸ ಮೆಚ್ಚುವಂತದ್ದ ಎಂದು ಸರ್ ಎಂ.ವಿಶ್ವೇಶ್ವರಯ್ಯ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಲಕ್ಷ್ಮಣಸಿಂಗ್ ವಗರನಾಳ ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ 27ನೇ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಾಕಿಸ್ತಾನಿ ಸೈನಿಕರು ವಶಪಡಿಸಿಕೊಂಡಿದ್ದ ಜಮ್ಮು, ಕಾಶ್ಮೀರದ ಕಾರ್ಗಿಲ್ ಶಿಖರಗಳನ್ನು ಭಾರತಕ್ಕೆ ಹಿಂಪಡೆಯಲು ಆಪರೇಷನ್ ವಿಜಯ್ ಹೆಸರಿನಲ್ಲಿ 1999ರ ಮೇ ತಿಂಗಳಿನಲ್ಲಿ ಭಾರತ ಯುದ್ಧ ಆರಂಭಿಸಿತು. ಸುಮಾರು 2 ತಿಂಗಳು ಕಾಲ ನಡೆದ ಯುದ್ಧದಲ್ಲಿ ಭಾರತೀಯ ಸೈನಿಕರು ಅಸಾಮಾನ್ಯ ಸಾಧನೆ ಮಾಡಿ, ವೀರ ಮರಣಹೊಂದಿದ ಹಲವರ ಬಲಿದಾನದಿಂದ ಯುದ್ಧದಲ್ಲಿ ಗೆಲುವು ಸಾಧಿಸಲಾಯಿತು. ಯುವಕರು ವೀರಯೋಧರಾಗಿ ಪಾಲಕರ, ನಾಡಿನ ಹೆಸರನ್ನು ತರಬೇಕು ಎಂದು ತಿಳಿಸಿದರು.
ಮೇಲ್ವಿಚಾರಕ ಮಲ್ಲಯ್ಯ ಗೋಮರ್ಸಿ, ಕ್ಯಾಪ್ಟನ್ ಪುಂಡಪ್ಪ ಅಡವಳ್ಳಿ, ಮಾಜಿ ಸೈನಿಕರಾದ ರವಿ ದೇಸಾಯಿ, ರವಿ ತಾಳಿ, ಶಿಕ್ಷಕರಾದ ಕುಮಾರ್ ದಶರಥ ಹುಲಿಹೈದರ್, ವೆಂಕಟೇಶ, ಶಿವಲೀಲಾ ತೋಳದ ಇತರರಿದ್ದರು.