ಅಂಕುಡೊಂಕುಗಳನ್ನು ಟೀಕಿಸಿದ್ದ ಕಾಯಕಯೋಗಿ

ಕನಕಗಿರಿಯ ಅಂಬಿಗರ ಚೌಡಯ್ಯ ವೃತ್ತದಲ್ಲಿ ನಡೆದ ಅಂಬಿಗರ ಚೌಡಯ್ಯ ಜಯಂತಿಯನ್ನಾಚರಿಸಲಾಯಿತು. ತಹಸೀಲ್ದಾರ್ ವಿಶ್ವನಾಥ ಮುರುಡಿ, ಲಾಲ್‌ಸಾಬ್, ಹನುಮೇಶ ವಾಲೇಕಾರ ಇತರರಿದ್ದರು.
ಕನಕಗಿರಿಯ ಅಂಬಿಗರ ಚೌಡಯ್ಯ ವೃತ್ತದಲ್ಲಿ ನಡೆದ ಅಂಬಿಗರ ಚೌಡಯ್ಯ ಜಯಂತಿಯನ್ನಾಚರಿಸಲಾಯಿತು. ತಹಸೀಲ್ದಾರ್ ವಿಶ್ವನಾಥ ಮುರುಡಿ, ಲಾಲ್‌ಸಾಬ್, ಹನುಮೇಶ ವಾಲೇಕಾರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಂಬಿಗರ ಚೌಡಯ್ಯ ಜಯಂತಿ
  • ನಿಜಶರಣ

ಅಂಕುಡೊಂಕುಗಳನ್ನು ಟೀಕಿಸಿದ್ದ ಕಾಯಕಯೋಗಿ

ಕನಕಗಿರಿ: ಅಂಬಿಗರ ಚೌಡಯ್ಯ ಅವರು ನೇರ, ನಿಷ್ಠೂರವಾಗಿದ್ದು, ಪ್ರಾಮಾಣಿಕರಾಗಿ ಕಾಯದಲ್ಲಿ ತೊಡಗುತ್ತಿದ್ದರು ಎಂದು ತಹಸೀಲ್ದಾರ್ ವಿಶ್ವನಾಥ ಮುರುಡಿ ಹೇಳಿದರು.
ಪಟ್ಟಣದ ಕೊಪ್ಪಳ ರಸ್ತೆಯಲ್ಲಿನ ಅಂಬಿಗರ ಚೌಡಯ್ಯ ವೃತ್ತದಲ್ಲಿ ಗಂಗಾಮತ ಸಮಾಜದಿಂದ ಬುಧವಾರ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಬಿಗರ ಚೌಡಯ್ಯ ಸಮಾಜದ ಅಂಕುಡೊಂಕುಗಳನ್ನು ನೇರ ಹಾಗೂ ಕಟುವಾಗಿ ಟೀಕಿಸುತ್ತಿದ್ದರು. ಮೌಢ್ಯತೆ ವಿರೋಧಿ, ಸ್ತ್ರೀವಾದಿ, ವೈಜ್ಞಾನಿಕ ವಿಜ್ಞಾನಿಯಾಗಿರುವುದನ್ನು ಅವರ ವಚನಗಳಲ್ಲಿ ಕಾಣಬಹುದು.
ಚೌಡಯ್ಯನವರು ತುಂಗಾ ನದಿಯಲ್ಲಿ ದೋಣಿಯಲ್ಲಿ ಜನರನ್ನು ಒಂದು ದಡದಿಂದ ಮತ್ತೊಂದು ದಡಕ್ಕೆ ಸಾಗಿಸುತ್ತಿದ್ದರು. ಬಸವಾದಿ ಶರಣರು ಪೂಜೆಗೆ ಕುಳಿತಾಗ ಶರಣರ ಮನಸ್ಸು ಪಾದರಕ್ಷೆಗಳೆಡೆಗೆ ಹೋಗದೇ ನಿಶ್ಚಿಂತೆಯಿಂದ ಪೂಜೆಯಲ್ಲಿ ತೊಡಗಿಕೊಳ್ಳಲಿ ಎಂದು ಅವರ ಪಾದರಕ್ಷೆಗಳನ್ನು ಕಾಯುವ ಮೂಲಕ ದೇವರನ್ನು ಕಾಣುತ್ತೇನೆ ಎಂದು ಹೇಳುತ್ತಿದ್ದರು. ಗಂಗಾಮತ ಸಮಾಜ ಶೈಕ್ಷಣಿಕವಾಗಿ ಹಿಂದುಳಿದಿದ್ದು, ಶಿಕ್ಷಣ ಪಡೆದು ಪ್ರಗತಿ ಸಾಧಿಸಬೇಕು ಎಂದರು.
ಪ್ರಮುಖರಾದ ಕೃಷ್ಣ ಬೆನಕನಾಳ, ದುರ್ಗೇಶ ವಾಲೇಕಾರ, ಟಿ.ಜೆ ರಾಜಶೇಖರ, ಲಾಲ್‌ಸಾಬ್, ಹನುಮೇಶ ವಾಲೇಕಾರ, ಕನಕಪ್ಪ ಗಂಗಾಮತ, ಹುಲಗಪ್ಪ ವಾಲೇಕಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net