ಮೌಖಿಕವಾಗಿ ಚರ್ಚಿಸಿ ಸ್ಥಳವನ್ನು ಈ ಹಿಂದಿನಂತೆ ನಿಗದಿಪಡಿಸಿ, ಬಿಡ್ ಮೊತ್ತವನ್ನು 22.5 ಲಕ್ಷ ರೂ.ಗಳಿಗೆ ಇಳಿಸಿದ್ದಲ್ಲದೆ, ಬಿಡ್‌ನ ದರದಿಂದ ನಷ್ಟವಾಗುತ್ತಿದ್ದರಿಂದ 30 ರೂ. ಬದಲಾಗಿ 40 ರೂ. ಮಾರಲು ಕೋರಿದಾಗ ಒಪ್ಪಿಗೆ ಕೊಟ್ಟಿದ್ದಾರೆ. ಅದರಂತೆ ಮಾರಾಟ ಮಾಡುತ್ತಿದ್ದೇವೆ. ಆದರೆ, ದೇವಸ್ಥಾನದಿಂದ ಯಾವುದೇ ಲಿಖಿತ ರೂಪದಲ್ಲಿ ದಾಖಲೆ ನೀಡಿಲ್ಲ. ಈ ಬಗ್ಗೆಯೂ ಪತ್ರ ಬರೆದಿದ್ದೇವೆ. ಆದರೆ, ದೇವಸ್ಥಾನದ ನೊಟೀಸ್‌ನಲ್ಲಿ 29 ಲಕ್ಷ ರೂ.ಗಳಿಗೆ ಬಿಡ್ ಪಡೆದಿದ್ದು, ನಿಯಮದಂತೆ ಇಲ್ಲಿಯವರೆಗಿನ ಹಣ ಭರಿಸಬೇಕೆಂದು ತಿಳಿಸಿರುವುದು ಸಮಸ್ಯೆಯಾಗಿದ್ದು, ನಾವು ಬಿಡ್‌ನಿಂದ ಹಿಂದೆ ಸರಿಯುತ್ತಿದ್ದೇವೆ ಎಂದು ಲಿಖಿತವಾಗಿ ತಿಳಿಸಿದ್ದಾರೆ.