ಆಗ ಮೈಸೂರು ರಾಜ್ಯ, ಹೈದ್ರಾಬದ್ ರಾಜ್ಯ ಸೇರಿ ಡ್ಯಾಂಗೆ ಮುಹೂರ್ತ ಇಟ್ಟಿದೆ. ಇಂದು ಮಿತ್ರ ಡಿ.ಕೆ.ಶಿವಕುಮಾರ್ ಉತ್ತಮ ಮುಹೂರ್ತ ನೋಡಿ ಗೇಟ್ ಅಳವಡಿಸಿದ್ದಾರೆ. ಇದರಿಂದ ನಮ್ಮ ರಾಜ್ಯದ ಅನೇಕ ಜಿಲ್ಲೆಗಳ ಲಕ್ಷಾಂತರ ರೈತರಿಗೆ ಅನುಕೂಲವಾಗಲಿದೆ. ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಅಭಿವೃದ್ಧಿ ಪರ ಇದ್ದಾರೆ.ಅವರ ನೇತೃತ್ವದಲ್ಲಿ ನಫ್ಟಿವಾಗಿ ಸಮುದ್ರ ಸೇರುವ ನದಿ ನೀರು ಉಳಿಸುವ ನಿರ್ಧಾರ ಮಾಡಿದ್ದೇವೆ. ಬಹು ವರ್ಫಿಗಳಿಂದ ಸಮಸ್ಯೆ ಇದೆ. ಹೂಳಿನ ಸಮಸ್ಯೆಯಿಂದ ನಮಗೆ 10 ಟಿಎಂಸಿ ನೀರು ಕೊರತೆ ಆಗುತ್ತಿದೆ. ಚಂದ್ರಬಾಬು ನಾಯ್ಡು, ಡಿ.ಕೆ.ಶಿವಕುಮಾರ್ ಸೇರಿ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದೇವೆ.