ಅದು ಒಂದು ಪ್ರದೇಶದಲ್ಲಿ ಬದುಕುವ ಜನರ ಜೀವನದ ಗುಣಮಟ್ಟ, ಆತ್ಮಗೌರವ ಹಾಗೂ ಮೂಲ ಸೌಕರ್ಯಗಳ ದೃಷ್ಟಿಕೋನದಿಂದ ನೋಡಬೇಕಿದೆ. ನೈಜ ಅಭಿವೃದ್ಧಿ ಸಾಧಿಸಬೇಕಾದರೆ ಪ್ರತಿಯೊಬ್ಬರಿಗೂ ಅನ್ನ, ಆಸರೆ, ಆರೋಗ್ಯ, ಅಕ್ಷರ ಹಾಗೂ ಆತ್ಮಗೌರವ ಬದುಕು ದೊರೆತಾಗ ಮಾತ್ರ ಸಾಧ್ಯವಾಗುತ್ತದೆ. ವಾಣಿಜ್ಯ ಕೇಂದ್ರ, ಭತ್ತದ ಕಣಜ ಎಂಬುದು ಕೇವಲ ಶ್ರೀಮಂತರ ಭಾಷೆಯಾಗುತ್ತದೆ. ಸರ್ವರನ್ನೂ ಒಳಗೊಳ್ಳುವ ಮತ್ತೊಂದು ಭಾಷೆಯ ಮೂಲಕ ನಾವೆಲ್ಲರೂ ಮಾತನಾಡಬೇಕಿದೆ ಎಂದರು.