ಸುಸ್ಥಿರ ಕೃಷಿ ಪದ್ಧತಿ ಅನುಸರಿಸಲಿ

ಗಂಗಾವತಿಯಲ್ಲಿ ಹಮ್ಮಿಕೊಂಡಿದ್ದ ಸ್ಮಾರ್ಟ್ ಾರ್ಮರ್ ಕ್ಲಬ್ ಸಮಾವೇಶ ಮತ್ತು ಸುಸ್ಥಿರ ಕೃಷಿಗೆ ತಾಂತ್ರಿಕ ಮಾರ್ಗದರ್ಶನ ಕಾರ್ಯಕ್ರಮವನ್ನು ಕೆವಿಕೆ ಮುಖ್ಯಸ್ಥ ಡಾ.ರಾಘವೇಂದ್ರ ಎಲಿಗಾರ್ ಸೋಮವಾರ ಉದ್ಘಾಟಿಸಿದರು. ಹಿರಿಯ ತಾಂತ್ರಿಕ ಅಧಿಕಾರಿ ಡಾ.ಜಿ.ನಾರಪ್ಪ, ಅಗ್ರಿ ಸೈನ್ಸಸ್ ಜನರಲ್ ಮ್ಯಾನೇಜರ್ ಶ್ರೀನಾಥ ಜಾಧವ್, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಮೋಹನರೆಡ್ಡಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕೆವಿಕೆ ಮುಖ್ಯಸ್ಥ ಡಾ. ರಾಘವೇಂದ್ರ ಎಲಿಗಾರ್ ಸಲಹೆ
ಗಂಗಾವತಿ: ಕೃಷಿ ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಜೆಯು ಅಗ್ರಿ ಸೈನ್ಸಸ್ ಮತ್ತು ಕೃಷಿ ವಿಜ್ಞಾನ ಕೇಂದ್ರದಿಂದ ಸ್ಮಾರ್ಟ್ ಾರ್ಮರ್ ಕ್ಲಬ್ ಸಮಾವೇಶ ಮತ್ತು ಸುಸ್ಥಿರ ಕೃಷಿಗೆ ತಾಂತ್ರಿಕ ಮಾರ್ಗದರ್ಶನ ಸೋಮವಾರ ಹಮ್ಮಿಕೊಳಳಲಾಗಿತ್ತು.
ಸಮಾವೇಶದಲ್ಲಿ ಮಣ್ಣಿನ ಆರೋಗ್ಯ ನಿರ್ವಹಣೆ, ಬೆಳೆ ಸಂರಕ್ಷಣೆಯಲ್ಲಿ ತಾಂತ್ರಿಕತೆ ಕುರಿತು ಮಾಹಿತಿ ನೀಡಲಾಯಿತು. ಭತ್ತದ ಬೆಳೆಯಲ್ಲಿ ಕಂಡು ಬರುವ ಕಾಂಡಕೊರಕ, ಎಲೆಸುರುಳಿ ರೋಗ ನಿಯಂತ್ರಣ, ಕೀಟಗಳ ತಡೆಗಟ್ಟುವಿಕೆ ಮತ್ತು ನಿರ್ವಹಣೆ ಕ್ರಮ ಕುರಿತು ತಜ್ಞರಿಂದ ಉಪನ್ಯಾಸ ನಡೆಯಿತು.
ಕೆವಿಕೆ ಮುಖ್ಯಸ್ಥ ಡಾ. ರಾಘವೇಂದ್ರ ಎಲಿಗಾರ್, ಹಿರಿಯ ತಾಂತ್ರಿಕ ಅಧಿಕಾರಿ ಡಾ.ಜಿ. ನಾರಪ್ಪ ಮಾತನಾಡಿ, ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಮಣ್ಣಿನ ಲವತ್ತತೆ ಮೇಲೆ ಪರಿಣಾಮ ಬೀರುತ್ತಿದ್ದು, ಸುಸ್ಥಿರ ಕೃಷಿ ಪದ್ಧತಿ ಅನುಸರಿಸುವಂತೆ ಸಲಹೆ ನೀಡಿದರು.
ಅಗ್ರಿ ಸೈನ್ಸಸ್ ಜನರಲ್ ಮ್ಯಾನೇಜರ್ ಶ್ರೀನಾಥ ಜಾಧವ್, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಮೋಹನರೆಡ್ಡಿ, ಪ್ರತಿನಿಧಿಗಳಾದ ಅಶೋಕ, ಸಂತೋಷ, ನಾಗರಾಜ, ಶ್ರೀನಿವಾಸ, ಪ್ರಭಾಕರ ಹಾಗೂ ವಿವಿಧ ಗ್ರಾಮಗಳ ರೈತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net