ಅಂತಾರಾಜ್ಯ ನೀರಾವರಿ ಯೋಜನೆಯಾದ ತುಂಗಭದ್ರಾ ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ರಾಜ್ಯದ ಪ್ರಮುಖ ಕೃಷಿ ಹಾಗೂ ಕುಡಿವ ನೀರಿನ ಆಧಾರ ಮೂಲ. 133 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯವಿದ್ದರೂ 28 ಟಿಎಂಸಿ ಹೂಳು ಭರ್ತಿಯಾಗಿ ಜೀವಜಲ ಶೇಖರಣೆ ಣಿಸುತ್ತಿದೆ. ಪರ್ಯಾಯ ಮಾರ್ಗ ಕಂಡುಕೊಳ್ಳುವುದಾಗಿ ಸರ್ಕಾರ ನೀಡುವ ಭರವಸೆ ಬಿಸಿಲು ಕುದುರೆಯಂತಾಗಿದೆ. ಪರಿಣಾಮ ವರ್ಷದಿಂದ ವರ್ಷಕ್ಕೆ ತುಂಗಭದ್ರೆ ಒಡಲ ಪ್ರಮಾಣ ಚಿಕ್ಕದಾಗುತ್ತಿದೆ.