ನಾನು ಖಾತೆ ಹಿಂದೆ ಹೋಗಿಲ್ಲ. ರಾಜೀನಾಮೆ ನೀಡಿದ್ದು ಬೇರೆ ವಿಷಯಕ್ಕೆ. ಜಲಸಂಪನ್ಮೂಲ ಖಾತೆ ರೈತರಿಗೆ ಸಂಬಂಧಿಸಿದ್ದು. ರೈತರ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ತೃಪ್ತಿ ತಂದಿದೆ. 37 ವರ್ಷ ರಾಜಕೀಯದಲ್ಲಿ ಸತತ ಶಾಸಕನಾಗಿರುವೆ. ಹಣಕಾಸು, ಎಪಿಎಂಸಿ, ಶಿಕ್ಷಣ, ಸಾರಿಗೆ, ಮುಜರಾಯಿ ಖಾತೆ ನಿಭಾಯಿಸಿರುವೆ. ಎಲ್ಲ ಖಾತೆಗಳನ್ನು ಚೆನ್ನಾಗಿ ನಿರ್ವಹಿಸಿರುವೆ. 1985ರಲ್ಲಿ ವಿಧಾನಸಭೆ ಪ್ರವೇಶಿಸಿದೆ. ನಮ್ಮ ತಂದೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಆಗಲೂ ನಾನು ಟಿಕೆಟ್ ಕೇಳಿರಲಿಲ್ಲ. ವೀರಪ್ಪ ಮೊಯ್ಲಿ ನನ್ನ ಕರೆದು ಟಿಕೆಟ್ ನೀಡಿದ್ದರು. ಯಾರಿಗೂ ಕೇಳದೆ ಅಧಿಕಾರ ಸಿಕ್ಕಿದ್ದು ನನ್ನ ಅದೃಷ್ಟವೆಂದು ಇತಿಹಾಸ ಮೆಲಕು ಹಾಕಿದರು.