ನೀರಾವರಿ ನಿಗಮದ ಅಧಿಕಾರಿಗಳು, ತುಂಗಭದ್ರಾ ಮಂಡಳಿ ಅಭಿಯಂತರರು ಗೇಟ್ ಅಳವಡಿಕೆ ವಿವರ ನೀಡಿದರು. 33 ಗೇಟ್ ಪೈಕಿ 32 ತಯಾರಾಗಿವೆ. ಒಂದು ಗೇಟ್ ಸಿದ್ಧಗೊಳ್ಳುತ್ತಿದೆ. ಗೇಟ್ 1ರಿಂದ 14 ಮತ್ತು 16 ರಿಂದ 33ವರೆಗಿನ ಒಟ್ಟು 32 ಗೇಟ್ಗಳನ್ನು ಸಂಪೂರ್ಣ ತೆರವುಗೊಳಿಸಲಾಗಿದೆ. 15ನೇ ಗೇಟ್ ತೆರವುಗೊಳಿಸಲಾಗುತ್ತಿದೆ. 20 ಗೇಟ್ಗಳ ಪ್ರಾಯೋಗಿಕ ಚಾಲನೆ ಪೂರ್ಣಗೊಂಡಿದೆ (1, 2, 3, 4, 11, 12, 17, 18, 19, 20, 24, 25, 26, 27, 28, 29, 30, 31, 32 ಮತ್ತು 33) 24 ಗೇಟ್ಗಳ ಅಳವಡಿಕೆ ಪೂರ್ಣಗೊಂಡಿದೆ (1, 2, 3, 4, 5, 6, 7, 11, 12, 17, 18, 19, 20, 21, 24, 25, 26, 27, 28, 29, 30, 31, 32 ಮತ್ತು 33). 7 ಗೇಟ್ಗಳ ಕೆಲಸ ಪ್ರಗತಿಯಲ್ಲಿದೆ (8, 9, 10, 13, 14, 16 ಮತ್ತು 22) ಎಂದು ವಿವರಿಸಿದರು.