ಮಹಾದಾಸೋಹದಲ್ಲಿ ಮೈಸೂರು ಪಾಕ ಸವಿ

ಕೊಪ್ಪಳದಲ್ಲಿ ಶನಿವಾರ ಗವಿಮಠದ ದಾಸೋಹ ಭವನದಲ್ಲಿ ಮೈಸೂರು ಪಾಕ ತಯಾರಿಸಿದ ಬಾಣಸಿಗರು.
ಕೊಪ್ಪಳದಲ್ಲಿ ಶನಿವಾರ ಗವಿಮಠದ ದಾಸೋಹ ಭವನದಲ್ಲಿ ಮೈಸೂರು ಪಾಕ ತಯಾರಿಸಿದ ಬಾಣಸಿಗರು.
Published on

ಪ್ರಮುಖ ಮುಖ್ಯಾಂಶಗಳು

  • ಪಲ್ಲಕ್ಕಿ-ಕಳಸ ಮೆರವಣಿಗೆ ಸಂಪನ್ನ
  • ಇಂದು ಶ್ರೀ ಗವಿಸಿದ್ಧೇಶ್ವರ ಲಘು ರಥೋತ್ಸವ
ಕೊಪ್ಪಳ: ಅಜ್ಜನ ಜಾತ್ರೆಗೆ ಸಿದ್ಧತೆ ಅಂತಿಮಗೊಂಡಿದ್ದು ಆಗಮಿಸುವ ಲಕ್ಷಾಂತರ ಭಕ್ತರಿಗೆ ತರಹೇವಾರಿ ಸಿಹಿ ತಿನಿಸುಗಳ ಜತೆಗೆ ಮೈಸೂರು ಪಾಕ ಸವಿ ದೊರೆಯಲಿದೆ.
ದಾಸೋಹಕ್ಕೆ ಅನೇಕ ಭಕ್ತರು ವಿವಿಧ ಖಾದ್ಯ ಅರ್ಪಿಸುತ್ತಿದ್ದಾರೆ. ಸಿಂಧನೂರಿನ ಗೆಳೆಯರ ಬಳಗದವರು ಪ್ರತಿ ವರ್ಷ ಒಂದಿಲ್ಲೊಂದು ಸಿಹಿ ತಿನಿಸು ಮಾಡುತ್ತಿದ್ದಾರೆ. ಈ ವರ್ಷ ಮೈಸೂರು ಪಾಕ ತಯಾರಿಸುತ್ತಿದ್ದು ಶನಿವಾರದಿಂದಲೇ ಪಾಕಶಾಲೆಯಲ್ಲಿ ಸಿಹಿ ಘಮಘಮಿಸುತ್ತಿದೆ. ಬೆಳಗ್ಗೆ 6 ರಿಂದ ರಾತ್ರಿ 11ಗಂಟೆವರೆಗೆ ಬಾಣಸಿಗರು ಪಾಕ ತಯಾರಿಸಿದರು. ಭಾನುವಾರವೂ ಮುಂದುವರೆಯಲಿದೆ. 60ಕ್ವಿಂಟಾಲ್ ಸಕ್ಕರೆ, 5,000 ಲೀಟರ್ ಅಡುಗೆ ಎಣ್ಣೆ, 30ಕ್ವಿಂಟಾಲ್ ಕಡಲೆ ಹಿಟ್ಟು, 5 ಕ್ವಿಂಟಾಲ್ ಮೈದಾ ಹಿಟ್ಟು, 30 ಕ್ವಿಂಟಾಲ್ ತುಪ್ಪ, 50 ಕೆ.ಜಿ.ಯಾಲಕ್ಕಿ ಬಳಕೆ ಮಾಡಲಾಯಿತು.
ಸುಮಾರು 10-12 ಲಕ್ಷ ಭಕ್ತರು ಪಾಕ ಸವಿಯಬಹುದು. ಅಥಣಿ, ಧನಾವರ, ಮಸ್ಕಿ, ಗಬ್ಬೂರು, ಬಳಗಾನೂರ, ತಾವರಗೇರಾ ಇನ್ನಿತರ ಗ್ರಾಮಗಳಿಂದ ಸುಮಾರು 100ಕ್ಕೂ ಹೆಚ್ಚು ಬಾಣಸಿಗರು ತಯಾರಿಕೆಯಲ್ಲಿ ತೊಡಗಿದರು. ಸಹಾಯಕ್ಕೆ 200ಕ್ಕೂ ಹೆಚ್ಚು ಭಕ್ತರು ಸಹಕಾರ ನೀಡಿದರು. ಇನ್ನು ವಿವಿಧ ಗ್ರಾಮಗಳ ಭಕ್ತರು ಮಠಕ್ಕೆ ದವಸ-ಧಾನ್ಯ, ಮಾದಲಿ, ರೊಟ್ಟಿ, ತರಕಾರಿ, ಬೇಳೆ, ಕಟ್ಟಿಗೆ ಇನ್ನಿತರ ವಸ್ತುಗಳನ್ನು ಸಲ್ಲಿಸುವುದು ಮುಂದುವರೆದಿದೆ. ಶನಿವಾರವೂ ವಿವಿಧ ಗ್ರಾಮದ ಭಕ್ತರು ಮೆರವಣಿಗೆ ಮೂಲಕ ಭಕ್ತಿಯಿಂದ ದೇಣಿಗೆ ಸಲ್ಲಿಸಿ ಗವಿಶ್ರೀಗಳ ಆಶೀರ್ವಾದ ಪಡೆದರು.

ಫಲ-ಪುಷ್ಫ ಪ್ರದರ್ಶನ

ಮಠದಂಗಳ ಸಿದ್ಧಗೊಂಡಿದ್ದು ರಥ ಬೀದಿ ಮಹಾರಥೋತ್ಸವಕ್ಕೆ ಕಾಯುತ್ತಿದೆ. ಜಾತ್ರಾ ಅಂಗಡಿಗಳು ನೆಲೆಯೂರಿದ್ದು, ಬೃಹತ್ ಜೋಕಾಲಿಗಳು ಜನರನ್ನು ಆಕರ್ಷಿಸುತ್ತಿವೆ. ಆಟಿಕೆ ಅಂಗಡಿಗಳು, ಬಳೆ, ಆಹಾರ ತಿನಿಸು ಇನ್ನಿತರ ಅಂಗಡಿಗಳು ವ್ಯಾಪಾರಕ್ಕೆ ಸಜ್ಜಾಗಿವೆ. ಕೃಷಿ, ತೋಟಗಾರಿಕೆ ಇಲಾಖೆ ತಮ್ಮ ಇಲಾಖೆ ವಸ್ತು ಪ್ರದರ್ಶನ, ಲ-ಪುಷ್ಪ ಪ್ರದರ್ಶನಕ್ಕೆ ಅಂತಿಮ ತಯಾರಿ ನಡೆಸಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net