ಹೊಸ ಕಟ್ಟಡಕ್ಕಾಗಿ 50ಲಕ್ಷ ರೂ. ಅನುದಾನವಿದ್ದು, ಬ್ಯಾಂಕ್‌ವೊಂದರಲ್ಲಿ ಠೇವಣಿಯಿಡಲಾಗಿದೆ. ಆಸ್ತಿಗಳ ರಕ್ಷಣೆಗೆ ತಂತಿ ಬೇಲಿ ಹಾಕುವುದು, ಸಿಸಿ ಕ್ಯಾಮರಾ ಅಳವಡಿಕೆ, ವಾಣಿಜ್ಯ ಕಟ್ಟಡ ಮತ್ತು ಗೋದಾಮುಗಳ ಬಾಡಿಗೆ ಹೆಚ್ಚಳ, ಸಕಾಲಕ್ಕೆ ರೈತರಿಗೆ ರಸಗೊಬ್ಬರ, ಕ್ರಿಮಿನಾಶಕ ವಿತರಣೆ ವ್ಯವಸ್ಥೆ ಮಾಡಲಾಗುವುದು. ರೈಸ್‌ಮಿಲ್ ಬಾಡಿಗೆಗೆ ಬೇಡಿಕೆ ಹೆಚ್ಚಾಗಿದ್ದು, 2019ರಿಂದ ಒಪ್ಪಂದ ಬದಲಾಗಿಲ್ಲ. ಆಡಳಿತ ಮಂಡಳಿ ವಿಶ್ವಾಸಕ್ಕೆ ತೆಗೆದುಕೊಂಡ ಸಂಸ್ಥೆಯ ಆದಾಯ ಹೆಚ್ಚಿಸಲಾಗುತ್ತಿದ್ದು, ಭ್ರಷ್ಟಾಚಾರ ತಡೆಗಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.