ಸಂಘದಲ್ಲಿ 15 ಸದಸ್ಯರ ಬಲದಲ್ಲಿ ಗುಂಜಳ್ಳಿ ರಾಜಶೇಖರಪ್ಪ ಮೃತಪಟ್ಟಿದ್ದರೆ, ಪಿಎಸ್ಸೆಸ್ಸೆನ್ ಪ್ರತಿನಿಧಿಗಳಾದ ಸುಭಾಷ ತಿಪ್ಪಶೆಟ್ಟಿ ಮತ್ತು ಬಸನಗೌಡ ಅವರು ಪಿಎಸ್ಸೆಸ್ಸೆನ್‌ನಿಂದ ಗೆದ್ದಿಲ್ಲ ಎಂಬ ಕಾರಣಕ್ಕಾಗಿ ನಿರ್ದೇಶಕ ಸ್ಥಾನ ರದ್ದಾಗಿದೆ. 12 ನಿರ್ದೇಶಕ ಬಲದ ಸಭೆಯಲ್ಲಿ ಕನಿಷ್ಠ 7 ಸದಸ್ಯರು ಭಾಗವಹಿಸಬೇಕಿತ್ತು. ನಿರ್ದೇಶಕ ಚನ್ನಪ್ಪ ಮಳಗಿ ಬೆಂಬಲಿತ 6 ಸದಸ್ಯರು ಭಾಗವಹಿಸಿದ್ದರು. ಅನಾರೋಗ್ಯ ನೆಪವೊಡ್ಡಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಜೋಗದ ನಾರಾಯಣಪ್ಪ ನಾಯಕ, ನಿರ್ದೇಶಕರಾದ ಈ.ನಾಗರಾಜ್, ಚೂಡಾಮಣಿ, ಗಿರೀಶ ನಾಯಕ, ಪ್ರಸಾದ ಮತ್ತು ಅಮರೇಶಪ್ಪ ಚುನಾವಣೆಯಿಂದ ದೂರ ಉಳಿದರು. ಹೀಗಾಗಿ ಚುನಾವಣೆ ರದ್ದುಗೊಳಿಸಲಾಯಿತು.