ಪ್ರಸಕ್ತ ವರ್ಷ ಗುರಿ ಮೀರಿ ತೊಗರಿ ಬಿತ್ತನೆ ಮಾಡಲಾಗಿದೆ. 1,190 ಹೆಕ್ಟೇರ್ ಗುರಿ ಇದ್ದು, 6,700 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಹೆಸರು 22,290 ಹೆಕ್ಟೇರ್ ನಿಗದಿಯಾಗಿದ್ದು, ಕೇವಲ 11,530 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಮೆಕ್ಕೆಜೋಳ 12,956 ಹೆಕ್ಟೇರ್ ಗುರಿಯಲ್ಲಿ 7,475 ಹೆಕ್ಟೇರ್ ಬಿತ್ತನೆಯಾಗಿದೆ. ಬನ್ನಿಕೊಪ್ಪ, ಇಟಗಿ, ಯರೇಹಂಚಿನಾಳ, ಬಿನ್ನಾಳ ಸೇರಿದಂತೆ ಎರಿ ಭೂಮಿ ಹೊಂದಿರುವ ರೈತರು ಹೆಚ್ಚಾಗಿ ಹೆಸರು ಬಿತ್ತನೆ ಮಾಡುತ್ತಾರೆ. ಮಳೆ ಕೊರತೆ ಕಾರಣ ಅನೇಕರು ಬಿತ್ತನೆ ಮಾಡಿಲ್ಲ. ಈಗಾಗಲೇ ಬಿತ್ತನೆ ಮಾಡಿದವರು ಫಸಲು ಕೈಸೇರುವ ನಿರೀಕ್ಷೆ ಕೈಬಿಟ್ಟು ಕುಳಿತಿದ್ದಾರೆ.