ಗಂಗಾವತಿಯಲ್ಲಿ ಸಾಂಸ್ಕೃತಿಕ ಸಂಭ್ರಮವನ್ನು ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಂಗಳವಾರ ಉದ್ಘಾಟಿಸಿದರು.ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ. ತಿಪ್ಪೇರುದ್ರಸ್ವಾಮಿ, ನಗರಸಭೆ ಮಾಜಿ ಸದಸ್ಯ ಮನೋಹರಗೌಡ ಹೇರೂರು, ಕಾನೂನು ಸಲಹೆಗಾರ್ತಿ ರಾಜೇಶ್ವರಿ ಸುರೇಶ, ಕಲಾವಿದರಾದ ವಿಜಯಲಕ್ಷ್ಮೀ ಹಿರೇಮಠ, ಕೆ. ಆಂಬಣ್ಣ, ಎಸ್.ಎಸ್. ಪಟ್ಟಣಶೆಟ್ಟಿ, ರಾಧಾ ಉಮೇಶ, ಆರ್. ಕಣ್ಣನ್ ಉಪಸ್ಥಿತರಿದ್ದರು.
ಗಂಗಾವತಿ: ನಗರದ ನೆಹರೂ ಪಾರ್ಕ್ ಮುಂಭಾಗದಲ್ಲಿ ವಿಜಯ ಮೆಲೋಡಿಸ್ ಹಾಗೂ ಹವ್ಯಾಸಿ ಕಲಾವಿದರಿಂದ ಸಾಂಸ್ಕೃತಿಕ ಸಂಭ್ರಮ ಮಂಗಳವಾರ ನಡೆಯಿತು.
ಗಣರಾಜ್ಯೋತ್ಸವ ಮತ್ತು ಹಿರೇಜಂತಕಲ್ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಈ ಸಮಾರಂಭದಲ್ಲಿ ಹವ್ಯಾಸಿ ಕಲಾವಿದರಿಂದ ಸುಗಮ ಸಂಗೀತ ಹಾಗೂ ಮಕ್ಕಳಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಗಣನೀಯ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಕಲೆ, ಸಂಸ್ಕೃತಿ ಮತ್ತು ಸಾಹಿತ್ಯಿಕ ಚಟುವಟಿಕೆಗಳನ್ನು ಬೆಳೆಸಿ ವಿಸ್ತರಿಸುವ ಹೊಣೆಗಾರಿಕೆ ಸಾಂಸ್ಕೃತಿಕ ಸಂಘಟನೆಗಳ ಮೇಲಿದೆ. ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ನಿರಂತರವಾಗಿ ನಡೆಯಬೇಕು ಎಂದರು.