ಸಮಾಜದ ಹಿರಿಯ ಧುರೀಣ ಹನುಮಂತಪ್ಪ ಸರಿಗಮ ಮಾತನಾಡಿ, ಎಲ್ಲ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯ ಹೊಂದುವುದರ ಜೊತೆಗೆ ಸಮಾಜವನ್ನು ಶೈಕ್ಷಣಿಕವಾಗಿ ಬಲಿಷ್ಠಗೊಳಿಸಲಾಗುತ್ತಿದೆ ಎಂದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಮಾಜದ ತಾಲೂಕಾಧ್ಯಕ್ಷ ನಿರುಪಾದಿ ಕೇಸರಹಟ್ಟಿ, ಪದಾಧಿಕಾರಿಗಳಾದ ಬಸವರಾಜ, ಎಚ್. ಮಂಜುನಾಥ ಕನಕಗಿರಿ, ವಿಕ್ರಂ ಪಾಟೀಲ, ಶರಣಪ್ಪ ಜನಾಪುರ, ಶರಣಬಸವಗೌಡ ಆಗೋಲಿ, ಎಚ್. ಶರಣಬಸಪ್ಪ, ಶರಣಪ್ಪ, ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.