ಕೂಲಿಕಾರರಿಗೆ ಸಕಾಲಕ್ಕೆ ಕೆಲಸ ನೀಡಲು ಕ್ರಮವಹಿಸಿ

ಕುಕನೂರು ತಾಪಂ ಕಚೇರಿ ಸಭಾಂಗಣದಲ್ಲಿ ಕುಡಿವ ನೀರಿನ ಸಮಸ್ಯೆ ಕುರಿತು ನಡೆದ ಸಭೆಯಲ್ಲಿ ಇಒ ಸಂತೋಷ ಬಿರಾದಾರ ಪಾಟೀಲ್ ಮಾತನಾಡಿದರು. ತಾಪಂ ಸಹಾಯಕ ನಿರ್ದೇಶಕ ಶರಣಪ್ಪ ಕೆಳಗಿನಮನಿ, ಯೋಜನಾ ನಿರ್ದೇಶಕ ಆನಂದ ಗರೂರ, ಆರ್‌ಡಬ್ಲುೃಎಸ್ ಎಇಇ ಸಾಹೇಬಣ್ಣ ಇದ್ದರು.
ಕುಕನೂರು ತಾಪಂ ಕಚೇರಿ ಸಭಾಂಗಣದಲ್ಲಿ ಕುಡಿವ ನೀರಿನ ಸಮಸ್ಯೆ ಕುರಿತು ನಡೆದ ಸಭೆಯಲ್ಲಿ ಇಒ ಸಂತೋಷ ಬಿರಾದಾರ ಪಾಟೀಲ್ ಮಾತನಾಡಿದರು. ತಾಪಂ ಸಹಾಯಕ ನಿರ್ದೇಶಕ ಶರಣಪ್ಪ ಕೆಳಗಿನಮನಿ, ಯೋಜನಾ ನಿರ್ದೇಶಕ ಆನಂದ ಗರೂರ, ಆರ್‌ಡಬ್ಲುೃಎಸ್ ಎಇಇ ಸಾಹೇಬಣ್ಣ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಾಪಂ ಇಒ ಸಂತೋಷ ಬಿರಾದಾರ ಪಾಟೀಲ್ ಸೂಚನೆ
  • ಯೋಜನೆಗಳ ಕುರಿತು ಸಭೆ
ಕುಕನೂರು: ತಾಲೂಕಿನ ಯಾವ ಗ್ರಾಮದಲ್ಲೂ ಕುಡಿವ ನೀರಿನ ಸಮಸ್ಯೆ ಉಂಟಾಗದಂತೆ ಕಾರ್ಯನಿರ್ವಹಿಸಬೇಕು ಎಂದು ತಾಪಂ ಇಒ ಸಂತೋಷ ಬಿರಾದಾರ ಪಾಟೀಲ್ ಹೇಳಿದರು.
ಪಟ್ಟಣದ ತಾಪಂ ಕಚೇರಿ ಸಭಾಂಗಣದಲ್ಲಿ ಕುಡಿವ ನೀರಿನ ಸಮಸ್ಯೆ ಹಾಗೂ ಇತರ ಯೋಜನೆಗಳ ಕುರಿತು ಶನಿವಾರ ನಡೆದ ಸಭೆಯಲ್ಲಿ ಮಾತನಾಡಿದರು. ಕುಡಿವ ನೀರಿನ ತೊಂದರೆ ಇರುವ ಇಟಗಿ, ಮಾಳೆಕೊಪ್ಪ, ತಳಬಾಳ, ಚಿಕ್ಕಬೀಡನಾಳ, ನಿಟ್ಟಾಲಿ, ಬಿನ್ನಾಳ, ಮುತ್ತಾಳ, ವೀರಾಪೂರ ಗ್ರಾಮಗಳಲ್ಲಿ ಸೂಕ್ತ ಕ್ರಮವಹಿಸಬೇಕು. ಅನಿವಾರ್ಯ ಸಂದರ್ಭಗಳಲ್ಲಿ ತಾಲೂಕು ಟಾಸ್ಕ್‌ಪೋರ್ಸ್ ನಡಾವಳಿಯಿಂದ ಒಪ್ಪಿಗೆ ಪಡೆದು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು ಎಂದು ಸೂಚಿಸಿದರು.
ನರೇಗಾ ಯೋಜನೆಯಡಿ ಕೂಲಿಕಾರರಿಗೆ ಸಕಾಲದಲ್ಲಿ ಕೆಲಸ ನೀಡಲು ಸೂಕ್ತ ಕ್ರಮ ವಹಿಸಬೇಕು. ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಕೂಲಿಕಾರರ ಇ-ಕೆವೈಸಿ ಮಾಡಿಸಬೇಕು. ಸ್ವಚ್ಛ ವಾಹಿನಿ ವಾಹನಗಳ ವಿಮೆ ಕಡ್ಡಾಯವಾಗಿ ಮಾಡಿಸಬೇಕು. ಸ್ವಚ್ಛ ಭಾರತ ಅಭಿಯಾನದಡಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.
ಜಿಪಂ ಎಸ್‌ಬಿಎಂ ಸಮಾಲೋಚಕ ಮಾರುತಿ, ತಾಪಂ ಸಹಾಯಕ ನಿರ್ದೇಶಕ ಶರಣಪ್ಪ ಕೆಳಗಿನಮನಿ, ಯೋಜನಾ ನಿರ್ದೇಶಕ ಆನಂದ ಗರೂರ, ಆರ್‌ಡಬ್ಲುೃಎಸ್ ಎಇಇ ಸಾಹೇಬಣ್ಣ, ನರೇಗಾ ಸಿಬ್ಬಂದಿ ಲಕ್ಷ್ಮಣ ಕೆರಳ್ಳಿ, ಸುರೇಶ ದೇಸಾಯಿ, ಗಿರೀಶ್ ಗೂಡೂರ, ಮಹೇಶ ಹಿರೇಮಠ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net