ಕಟ್ಟಡ ನಿರ್ಮಾಣಕ್ಕೆ ಸಮಸ್ಯೆ ಇಲ್ಲದಂತೆ ಕ್ರಮವಹಿಸಿ

ಕುಕನೂರಿನ ಗುದ್ನೆಪ್ಪನಮಠದ ನಿವೇಶನದಲ್ಲಿ ಮಂಜೂರಾದ ತಾಲೂಕು ನ್ಯಾಯಾಲಯದ ಕಟ್ಟಡ ನಿರ್ಮಾಣಕ್ಕಾಗಿ ಗುರುತಿಸಲಾದ ಜಾಗಕ್ಕೆ ಹೈಕೋರ್ಟ್ ನ್ಯಾ.ಸಿ.ಎಂ.ಪೂಣಚ್ಚ ಭೇಟಿ ನೀಡಿ ಪರಿಶೀಲಿಸಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾ.ಸಿ.ಚಂದ್ರಶೇಖರ್, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾ.ಡಿ.ಕೆ.ಕುಮಾರ, ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗತ್ತಿ, ಡಿವೈಎಸ್ಪಿ ಪಿ.ಮುತ್ತಣ್ಣ ಸರ್ವಗೋಳ್ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಹೈಕೋರ್ಟ್ ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಸೂಚನೆ
  • ಕೋರ್ಟ್ ಕಟ್ಟಡ ನಿರ್ಮಾಣಕ್ಕಾಗಿ ಗುರುತಿಸಿದ ಜಾಗಕ್ಕೆ ಭೇಟಿ
ಕುಕನೂರು: ಪಟ್ಟಣದ ಗುದ್ನೆಪ್ಪನಮಠದ ನಿವೇಶನದಲ್ಲಿ ಮಂಜೂರಾಗಿರುವ ತಾಲೂಕು ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕಾಗಿ ಗುರುತಿಸಲಾದ ಜಾಗಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಭೇಟಿ ನೀಡಿ ಪರಿಶೀಲಿಸಿದರು.
ನಗರದ 19ವಾರ್ಡ್‌ನ ಗುದ್ನೆಪ್ಪನ ಮಠದಲ್ಲಿ ಪ್ರಸ್ತಾವಿತ ಜಾಗದ ವಿಸ್ತೀರ್ಣ, ಸುತ್ತಲಿನ ಪರಿಸರ ಮತ್ತು ಸಾರ್ವಜನಿಕ ವ್ಯವಸ್ಥೆಯ ಮಾಹಿತಿ ಪಡೆದರು. ಕೋರ್ಟ್ ಹಂತದಲ್ಲಿರುವ ಈ ಜಮೀನಿನ ವಿಚಾರ ಇತ್ಯರ್ಥಗೊಂಡ ನಂತರ ಕಟ್ಟಡ ನಿರ್ಮಾಣಕ್ಕೆ ಯಾವುದೇ ತಾಂತ್ರಿಕ ತೊಂದರೆಗಳಿಲ್ಲದಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾ.ಸಿ.ಚಂದ್ರಶೇಖರ್, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾ.ಡಿ.ಕೆ.ಕುಮಾರ, ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗತ್ತಿ, ಡಿವೈಎಸ್ಪಿ ಪಿ.ಮುತ್ತಣ್ಣ ಸರ್ವಗೋಳ್, ಸಿಪಿಐ ಮೌನೇಶ್ವರ ಮಾಲಿ ಪಾಟೀಲ್, ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರು, ಎಇಇ ಮಲ್ಲಿಕಾರ್ಜುನ, ವಕೀಲರ ಸಂಘದ ಅಧ್ಯಕ್ಷ ಸುಭಾಸ್ ಎಸ್.ಹೊಂಬಾಳ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net