ಮೇ 10ರಿಂದ 14ರವರೆಗೆ ಜಾತ್ರೆಗೆ ಆಗಮಿಸುವ ಭಕ್ತರಿಗೆ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಮಹಾರಥೋತ್ಸವದ ನಂತರ ಒಂದು ತಿಂಗಳ ನಡೆಯುವ ಜಾತ್ರೆಗೆ ದೇವಸ್ಥಾನದಿಂದ 4 ಟ್ಯಾಂಕರ್‌ಗಳಂತೆ ಒಟ್ಟು 40 ಟ್ಯಾಂಕರ್‌ಗಳನ್ನು ಬಾಡಿಗೆ ಪಡೆದು. ಹೆಚ್ಚು ನೀರಿನ ಸೌಲಭ್ಯವನ್ನು ಒದಗಿಸಲು ವ್ಯವಸ್ಥೆ ವಾಡಬೇಕು. ಜನಸಂದಣಿ ಹೆಚ್ಚಿರುವ ಪ್ರದೇಶದಲ್ಲಿ ಸಿಸ್ಟಮ್ ವಾಡಿ ಕುಡಿಯುವ ನೀರು ಒದಗಿಸಿ. ವಾಹನ ನಿಲುಗಡೆ ಪ್ರದೇಶಗಳಲ್ಲಿ, ದೇವಸ್ಥಾನಕ್ಕೆ ಬರುವ ಎಲ್ಲ ಹಾದಿಯಲ್ಲಿ, ಭಕ್ತರು ತಂಗುವ ಸ್ಥಳಗಳಲ್ಲಿ ಮತ್ತು ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ಹೋಗುವ ಭಕ್ತರಿಗೆ ಅವಶ್ಯಕತೆಗನುಗುಣವಾಗಿ ಕುಡಿಯುವ ನೀರಿನ ವ್ಯವಸ್ಥೆ ವಾಡಲು ಸೂಚಿಸಿದರು.