ಕೊಪ್ಪಳದ ಸವೋರ್ದಯ ಗ್ರಾಮೀಣ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮಂಗಳವಾರ ವಿಶ್ವ ಶ್ರವಣ ದಿನ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ ಕಿವಿ ತಪಾಸಣಾ ಶಿಬಿರದಲ್ಲಿ ಇಎನ್ಟಿ ತಜ್ಞರಾದ ಡಾ. ಅವಿನಾಶ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಯನ್ನು ಪರೀಸುತ್ತರುವುದು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಡಾ. ಪ್ರಕಾಶ ಹೆಚ್. ಕರೆ
ಕಿವಿ ತಪಾಸಣಾ ಶಿಬಿರ
ಕೊಪ್ಪಳ : ಯಾವುದೇ ಮಗು ಶ್ರವಣದೋಷ ಅಥವಾ ಕಿವುಡುತನದಿಂದ ಭವಿಷ್ಯದಲ್ಲಿ ಹಿಂದೆ ಉಳಿಯಬಾರದು. ಸಮುದಾಯದ ಪ್ರತಿಯೊಬ್ಬರೂ ಕಿವಿಯ ಆರೋಗ್ಯದ ಬಗ್ಗೆ ಈಗಲೇ ನಿಗಾವಹಿಸುವುದು ಅಗತ್ಯ ಎಂದು ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಕಾಶ ಹೆಚ್. ತಿಳಿಸಿದರು.
ನಗರದ ಸವೋರ್ದಯ ಗ್ರಾಮೀಣ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮಂಗಳವಾರ ವಿಶ್ವ ಶ್ರವಣ ದಿನ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ ಕಿವಿ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಕಿವಿ ಪಂಚೇಂದ್ರಿಯಗಳಲ್ಲಿ ಪ್ರಮುಖ ಅಂಗ. ಕಿವಿಯಲ್ಲಿ ಕಡ್ಡಿ ಹಾಕುವುದು, ಎಣ್ಣೆ ಬಿಡುವುದು ಅಥವಾ ನಕಲಿ ವೈದ್ಯರಿಂದ ಗುಗ್ಗೆ ತೆಗೆಸುವ ಸಾಹಸ ಮಾಡಬಾರದು. ಕಲುಷಿತ ನೀರಿನಲ್ಲಿ ಈಜಬಾರದು ಹಾಗೂ ವೈದ್ಯರ ಸಲಹೆ ಇಲ್ಲದೆ ಕಿವಿಗೆ ಯಾವುದೇ ಔಷಸಧ ಹಾಕಬಾರದು. 2 ವರ್ಷದೊಳಗಿನ ಮಕ್ಕಳಿಗೆ ಶ್ರವಣದೋಷವಿದ್ದಲ್ಲಿ ಸರ್ಕಾರದಿಂದ ಉಚಿತ ಶಸ್ತ್ರಚಿಕಿತ್ಸೆ ಸೌಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದರು.
ಇಎನ್ಟಿ ತಜ್ಞರಾದ ಡಾ. ಅವಿನಾಶ ಮಾತನಾಡಿ, ನವಜಾತ ಶಿಶುಗಳ ಕಿವಿಯ ಆರೈಕೆ ಮತ್ತು ರಾಷ್ಟ್ರೀಯ ಶ್ರವಣದೋಷ ನಿಯಂತ್ರಣ ಕಾರ್ಯಕ್ರಮದಡಿ ಸಿಗುವ ಸೌಲಭ್ಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾಲೇಜಿನ ಪ್ರಾಂಶುಪಾಲ ನಿಂಗಪ್ಪ ಗದ್ದಿಗೇರಿ ಮಾತನಾಡಿ, ಇಂತಹ ಶಿಬಿರಗಳು ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಿದ್ದು, ಇಲ್ಲಿ ಕಲಿತ ವಿಫಿಯಗಳನ್ನು ವಿದ್ಯಾರ್ಥಿಗಳು ತಮ್ಮ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ತಿಳಿಸಿ ಅರಿವು ಮೂಡಿಸಬೇಕು ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ., ಆಡಿಯೋಲಾಜಿಸ್ಟ್ ಬಿಂದು, ನಗರ ಆರೋಗ್ಯ ಕೇಂದ್ರದ ಸಿಬ್ಬಂದಿ ಶ್ರೀನಿವಾಸ, ಆರೋಗ್ಯ ನಿರೀಕ್ಷಣಾಧಿಕಾರಿ ಲೋಹಿತ, ಆಶಾ ಕಾರ್ಯಕರ್ತೆಯರು ಇತರರಿದ್ದರು.