ಸರ್ಕಾರಿ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಿ

ಕುಕನೂರು ತಾಲೂಕಿನ ನೆಲಜೇರಿ ಗ್ರಾಮದಲ್ಲಿ ಗಣರಾಜ್ಯೋತ್ಸವದ ನಿಮಿತ್ತ ಅಂವಿಕಲರಿಗೆ ಹಾಗೂ ಸ್ವ-ಸಹಾಯ ಸಂಘದ ಸದಸ್ಯರಿಗೆ ಗ್ರಾಪಂ ಪಿಡಿಒ ಅಕ್ಕಮಹಾದೇವಿ ರುದ್ರಸ್ವಾಮಿಮಠ ರೊಟ್ಟಿಮಿಷನ್ ವಿತರಿಸಿದರು. ಗ್ರಾಪಂ ಅಧ್ಯಕ್ಷ ಮಂಜುನಾಥ್ ನಕ್ಲರ್, ಉಪಾಧ್ಯಕ್ಷೆ ಗೌರಮ್ಮ ರಾಮಣ್ಣ ತಳವಾರ, ಮಾಜಿ ಅಧ್ಯಕ್ಷ ಉಮೇಶಗೌಡ ಪಾಟೀಲ್, ಸದಸ್ಯ ಶೇಖರಪ್ಪ ಕೊಳಜಿ, ಕಾರ್ಯದರ್ಶಿ ಫಕೀರಪ್ಪ ಮೂಲಿಮನಿ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ರೊಟ್ಟಿ ಮಿಷನ್ ವಿತರಿಸಿ

ಸರ್ಕಾರಿ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಿ

ಕುಕನೂರು: ಸರ್ಕಾರದಿಂದ ಗ್ರಾಪಂಗೆ ಮಂಜೂರಾದ ಯೋಜನೆಗಳನ್ನು ಸಕಾಲಕ್ಕೆ ಪಡೆದುಕೊಳ್ಳಲು ಮುಂದಾಗಬೇಕು ಎಂದು ಗ್ರಾಪಂ ಪಿಡಿಒ ಅಕ್ಕಮಹಾದೇವಿ ರುದ್ರಸ್ವಾಮಿಮಠ ಹೇಳಿದರು.
ತಾಲೂಕಿನ ನೆಲಜೇರಿ ಗ್ರಾಮದಲ್ಲಿ ಗಣರಾಜ್ಯೋತ್ಸವದ ನಿಮಿತ್ತ ಸೋಮವಾರ ಅಂಗವಿಕಲರಿಗೆ ಹಾಗೂ ಸ್ವ-ಸಹಾಯ ಸಂಘದ ಸದಸ್ಯರಿಗೆ ರೊಟ್ಟಿ ಮಿಷನ್ ವಿತರಿಸಿ ಮಾತನಾಡಿದರು. ಅಂಗವಿಕಲರು ನ್ಯೂನತೆಯಿಂದ ಬಳಲುತ್ತಿದ್ದರು ಸ್ವಾವಲಂಬಿ ಬದುಕು ನಡೆಸುತ್ತಿದ್ದಾರೆ.
ಸಮಾಜದಲ್ಲಿ ಅಂಗವಿಕಲರನ್ನು ಗೌರವದಿಂದ ಕಾಣಬೇಕು. 15ನೇ ಹಣಕಾಸು ಯೋಜನೆಯಡಿ ಶೇ.5 ಅನುದಾನದ ಮೂಲಕ ರೊಟ್ಟಿ ಮಿಷನ್ ಖರೀದಿಸಿ ಸ್ವಸಹಾಯ ಗುಂಪಿನ ಸದಸ್ಯರಿಗೆ ಹಾಗೂ ಅಂಗವಿಕಲರ ಅನುಕೂಲಕ್ಕೆ ವಿತರಿಸಿದ್ದು, ಫಲಾನುಭವಿಗಳು ಸದ್ಬಳಕೆ ಮಾಡಿಕೊಳ್ಳಿ ಎಂದರು.
ಗ್ರಾಪಂ ಅಧ್ಯಕ್ಷ ಮಂಜುನಾಥ್ ನಕ್ಲರ್, ಉಪಾಧ್ಯಕ್ಷೆ ಗೌರಮ್ಮ ರಾಮಣ್ಣ ತಳವಾರ, ಮಾಜಿ ಅಧ್ಯಕ್ಷ ಉಮೇಶಗೌಡ ಪಾಟೀಲ್, ಸದಸ್ಯ ಶೇಖರಪ್ಪ ಕೊಳಜಿ, ಕಾರ್ಯದರ್ಶಿ ಫಕೀರಪ್ಪ ಮೂಲಿಮನಿ, ವಿಆರ್‌ಡಬ್ಲುೃ ಮಂಜುಳಾ ಟಣಕನಕಲ್, ಕಾಯಕಮಿತ್ರ ಲಲಿತಾ ಹೊಸೂರು, ಕರವಸೂಲಿಗಾರ ಯಮನೂರಪ್ಪ ಗುನ್ನಾಳ, ಗ್ರಂಥಾಲಯ ಮೇಲ್ವಿಚಾರಕ ದೇವರಾಜ ಮ್ಯಾದನೇರಿ, ಕಂಪ್ಯೂಟರ್ ಆಪರೇಟರ್ ಮಂಜುಳಾ ಉಸಗಲಿ, ಸಿಬ್ಬಂದಿ ಯಾಶ್ಮೀನ್ ಚಳಗೇರಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net