ಕುಷ್ಟಗಿಯಲ್ಲಿ ರೈಲ್ವೆ ಹೋರಾಟ ಸಮಿತಿಯಿಂದ ಸಂಸದ ರಾಜಶೇಖರ್ ಹಿಟ್ನಾಳಗೆ ಮನವಿ ಸಲ್ಲಿಸಲಾಯಿತು. ಸಮಿತಿ ಪ್ರಧಾನ ಕಾರ್ಯದರ್ಶಿ ವೀರೇಶ್ ಬಂಗಾರಶೆಟ್ಟರ್, ಸದಸ್ಯರಾದ ಮಂಜುನಾಥ ಮಹಾಲಿಂಗಪುರ, ಶ್ರೀಧರ ಘೋರ್ಪಡೆ, ವೀರೇಶ್ ಕರಡಿ ಇದ್ದರು.
ಕುಷ್ಟಗಿ: ಕುಷ್ಟಗಿ-ಹುಬ್ಬಳ್ಳಿ ಮಾರ್ಗವಾಗಿ ಬೆಂಗಳೂರಿಗೆ ರೈಲು ಓಡಿಸುವಂತೆ ಒತ್ತಾಯಿಸಿ ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳು ಸಂಸದ ರಾಜಶೇಖರ್ ಹಿಟ್ನಾಳಗೆ ಸೋಮವಾರ ಮನವಿ ಸಲ್ಲಿಸಿದರು.
ಸಮಿತಿ ಪ್ರಧಾನ ಕಾರ್ಯದರ್ಶಿ ವೀರೇಶ್ ಬಂಗಾರಶೆಟ್ಟರ್ ಮಾತನಾಡಿ, ಪಟ್ಟಣದಿಂದ ತಳಕಲ್ ಮಾರ್ಗವಾಗಿ ಹುಬ್ಬಳ್ಳಿ-ಬೆಂಗಳೂರಿಗೆ ಸಂಪರ್ಕ ಹೊಂದಿರುವ ಸೂಪರ್ ಫಾಸ್ಟ್ ರೈಲು ಓಡಿಸಲು ಅನುಕೂಲ ಕಲ್ಪಿಸಬೇಕು.
ಈಗಾಗಲೇ ಕುಷ್ಟಗಿವರೆಗೆ ಜಂಕ್ಷನ್ ಕಾಮಗಾರಿ ಪೂರ್ಣಗೊಂಡಿದ್ದು, ಈ ಭಾಗದ ಪ್ರಯಾಣಿಕರು ಬೆಂಗಳೂರಿಗೆ ತೆರಳಲು ಅನುಕೂಲವಾಗಲಿದೆ.
ಸುತ್ತಲಿನ ಗಜೇಂದ್ರಗಡ, ಇಳಕಲ್, ಹುನಗುಂದ, ಯಲಬುರ್ಗಾ, ಕುಕನೂರು, ಗದಗ ಜಿಲ್ಲೆಯ ಪ್ರಯಾಣಿಕರಿಗೆ ವೈದ್ಯಕೀಯ, ಶಿಕ್ಷಣ, ಹೈಕೋರ್ಟ್, ವ್ಯಾಪಾರಕ್ಕಾಗಿ ಬೆಂಗಳೂರಿಗೆ ತೆರಳಲು ಅನುಕೂಲ ಜತೆಗೆ ಬಡವರು ಬಸ್‌ಗೆ ವ್ಯಯಿಸುವ ಹಣ ಉಳಿಯಲಿದೆ ಎಂದರು.
ರೈಲ್ವೆ ಸಮಿತಿ ಸದಸ್ಯರಾದ ಮಂಜುನಾಥ ಮಹಾಲಿಂಗಪುರ, ಶ್ರೀಧರ ಘೋರ್ಪಡೆ, ವೀರೇಶ್ ಕರಡಿ, ಆಂಜನೇಯ ವಾಲ್ಮೀಕಿ, ನಜೀರಸಾಬ್, ಬಸಯ್ಯ ಸಾಲಿಮಠ ಇತರರಿದ್ದರು.