ರೋಟರಿ ಕ್ಲಬ್ ಜಾಗತಿಕ ಮಟ್ಟದ ಸಂಸ್ಥೆ

ಗಂಗಾವತಿಯಲ್ಲಿ ರೋಟರಿ ಕ್ಲಬ್ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಹೊಸಪೇಟೆ ಕ್ಲಬ್ ಮಾಜಿ ಜಿಲ್ಲಾ ಸಭಾಪಾಲಕ ಆರ್. ಗೋಪಿನಾಥ ಭಾನುವಾರ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಟಿ.ಆಂಜನೇಯ, ತಾಲೂಕಾಧ್ಯಕ್ಷ ಎಂ.ಗುರುರಾಜ್ ಇತರರಿದ್ದರು.
ಗಂಗಾವತಿಯಲ್ಲಿ ರೋಟರಿ ಕ್ಲಬ್ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಹೊಸಪೇಟೆ ಕ್ಲಬ್ ಮಾಜಿ ಜಿಲ್ಲಾ ಸಭಾಪಾಲಕ ಆರ್. ಗೋಪಿನಾಥ ಭಾನುವಾರ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಟಿ.ಆಂಜನೇಯ, ತಾಲೂಕಾಧ್ಯಕ್ಷ ಎಂ.ಗುರುರಾಜ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಜಿಲ್ಲಾ ಸಭಾಪಾಲಕ ಆರ್. ಗೋಪಿನಾಥ ಹೇಳಿಕೆ
ಗಂಗಾವತಿ: ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ರೋಟರಿ ಕ್ಲಬ್ ಜಾಗತಿಕ ಮಟ್ಟದಲ್ಲಿ ಸ್ವಯಂಪ್ರೇರಿತ ಸಂಸ್ಥೆಯಾಗಿದೆ ಎಂದು ಹೊಸಪೇಟೆ ಕ್ಲಬ್ ಮಾಜಿ ಜಿಲ್ಲಾ ಸಭಾಪಾಲಕ ಆರ್. ಗೋಪಿನಾಥ ಹೇಳಿದರು.
ನಗರದ ಕಿರಾಣಿ ವರ್ತಕರ ಸಂಘದ ಸಭಾಂಗಣದಲ್ಲಿ ರೋಟರಿ ಕ್ಲಬ್ ತಾಲೂಕು ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಮುಖವಾದ ಏಳು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಶಾಂತಿ ನಿರ್ಮಾಣ, ರೋಗ ತಡೆಗಟ್ಟುವಿಕೆ, ಶುದ್ಧ ನೀರು ಮತ್ತು ನೈರ್ಮಲ್ಯ, ತಾಯಿ ಮಕ್ಕಳ ಆರೋಗ್ಯ, ಮೂಲಭೂತ ಶಿಕ್ಷಣ ಸಾಕ್ಷರತೆ, ಸಮುದಾಯ ಆರ್ಥಿಕ ಅಭಿವೃದ್ಧಿ ಮತ್ತು ಪರಿಸರ ರಕ್ಷಣೆ ಜತೆಗೆ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳತ್ತಿದೆ ಎಂದರು.
ಜಿಲ್ಲಾ ಕಾರ್ಯದರ್ಶಿ ಟಿ. ಆಂಜನೇಯ ಮಾತನಾಡಿ, ಪೋಲಿಯೋ ನಿರ್ಮೂಲನೆಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ್ದು, ಪೋಲಿಯೋಮುಕ್ತ ದೇಶವಾಗಿದೆ. ಗುಣಮಟ್ಟದ ಶಿಕ್ಷಣ, ಜಲ ಸಂರಕ್ಷಣೆ, ವಿಶ್ವದಲ್ಲಿ ಶಾಂತಿಗಾಗಿ ಸೇವೆಸಲ್ಲಿಸುತ್ತಿದೆ ಎಂದರು.
ನಿಕಟಪೂರ್ವ ಅಧ್ಯಕ್ಷ ಜಗದೀಶ ಅಂಗಡಿ, ಕೆಸಿಎಸ್ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಶರಣಬಸಪ್ಪ ಕೋಲ್ಕಾರ್ ಮಾತನಾಡಿದರು. ರೋಟರಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎನ್.ಆರ್. ಶ್ರೀನಿವಾಸ, ನೂತನ ಅಧ್ಯಕ್ಷ ಎಂ.ಗುರುರಾಜ್, ಕಾರ್ಯದರ್ಶಿ ರಾಮ್ ಪ್ರಸಾದ ಕೊಡಗಲಿ, ಉಪಾಧ್ಯಕ್ಷ ಎಚ್.ಎಂ. ಮಂಜುನಾಥ, ಸಹ ಕಾರ್ಯದರ್ಶಿ ಡಾ.ಬಿ.ಶ್ರೀಕಾಂ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net