ವೈರಲ್ ಆದ 44 ಸೆಕೆಂಡ್‌ಗಳ ಆಡಿಯೋ ಸಮೇತ ದೂರು ನೀಡಿದ್ದು, ಅದರಲ್ಲಿನ ಸಂಭಾಷಣೆಯನ್ನು ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಪ್ರಕರಣ ನಿಷ್ಪಕ್ಷಪಾತ ತನಿಖೆ ನಡೆಸಿ ಮುಖ್ಯಾಧಿಕಾರಿ ಅಮಾನತುಗೊಳಿಸಬೇಕು. ಲೋಕಾಯುಕ್ತ ಮೂಲಕ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ. ಆಡಿಯೋ ಸಿಡಿ ಜತೆಗೆ ಪತ್ರಿಕಾ ವರದಿಗಳನ್ನೂ ಲಗತ್ತಿಸಲಾಗಿದೆ. ಈ ವೇಳೆ ಬಿಜೆಪಿ ಯುವ ಮುಖಂಡ ನರಸಪ್ಪ ಕುರುಗೋಡ ಇದ್ದರು.