ಉತ್ತಮ ಶಿಕ್ಷಣದಿಂದ ಸಾಧನೆ ಸಾಧ್ಯ

ಅಳವಂಡಿ ಸಮೀಪದ ಬೋಚನಹಳ್ಳಿಯಲ್ಲಿ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ಗ್ರಾಪಂ ಅಧ್ಯಕ್ಷೆ ಅಡಿವೆವ್ವ ಚವಟಗಿ ಉದ್ಘಾಟಿಸಿದರು. ಪಿಡಿಒ ಸಂಜಯ ಚವಡಾಳ, ಕಾರ್ಯದರ್ಶಿ ಅಕ್ಬರ್ ಸಾಬ್ ಮಿಟಾಯಿ,  ಪ್ರಮುಖರಾದ ಹನುಮೇಶ, ಸಣ್ಣ ಹನುಮಪ್ಪ, ರೆಹಮತ್ ಬಿ, ಯಮನೂರಪ್ಪ ಇದ್ದರು.
ಅಳವಂಡಿ ಸಮೀಪದ ಬೋಚನಹಳ್ಳಿಯಲ್ಲಿ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ಗ್ರಾಪಂ ಅಧ್ಯಕ್ಷೆ ಅಡಿವೆವ್ವ ಚವಟಗಿ ಉದ್ಘಾಟಿಸಿದರು. ಪಿಡಿಒ ಸಂಜಯ ಚವಡಾಳ, ಕಾರ್ಯದರ್ಶಿ ಅಕ್ಬರ್ ಸಾಬ್ ಮಿಟಾಯಿ, ಪ್ರಮುಖರಾದ ಹನುಮೇಶ, ಸಣ್ಣ ಹನುಮಪ್ಪ, ರೆಹಮತ್ ಬಿ, ಯಮನೂರಪ್ಪ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬೇಡಿಕೆ
  • ಅಹವಾಲು
  • ಗ್ರಾಮಸಭೆ
ಅಳವಂಡಿ: ಮಕ್ಕಳು ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳಲು ಹಾಗೂ ಬೇಕು ಬೇಡಗಳನ್ನು ನಿರ್ಭಯವಾಗಿ ಹೇಳಿಕೊಳ್ಳಲು ಮಕ್ಕಳ ಗ್ರಾಮಸಭೆ ವೇದಿಕೆಯಾಗಿದೆ ಎಂದು ಪಿಡಿಒ ಸಂಜಯ ಚವಡಾಳ ಹೇಳಿದರು.
ಸಮೀಪದ ಬೋಚನಹಳ್ಳಿ ಗ್ರಾಪಂ ವತಿಯಿಂದ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ಗ್ರಾಮ ಸಭೆಯಲ್ಲಿ ಮಾತನಾಡಿದರು.
ಸಾರ್ವಜನಿಕರು ತಮ್ಮ ಬೇಡಿಕೆ ಅಹವಾಲುಗಳನ್ನು ಗ್ರಾಮಸಭೆ ಮೂಲಕ ಸಲ್ಲಿಸುತ್ತಾರೆ. ಅದೇ ರೀತಿ ಮಕ್ಕಳೂ ಸಹ ತಮ್ಮ ಬೇಡಿಕೆ ಕುಂದು-ಕೊರತೆಗಳನ್ನು ಮಕ್ಕಳ ಗ್ರಾಮಸಭೆ ಮೂಲಕ ಪರಿಹರಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶ ನೀಡಲಾಗಿದೆ. ಮಕ್ಕಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಶಿಕ್ಷಣ ಪಡೆದರೆ ಮಾತ್ರ ಸಾಧನೆ ಸಾಧ್ಯ ಎಂದರು.
ಮುಖ್ಯ ಶಿಕ್ಷಕ ದೇವಪ್ಪ ಬಚಕ್ಕನವರ ಮಾತನಾಡಿ, ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಲಿಂಗ ತಾರತಮ್ಯ ಹೀಗೆ ಅನೇಕ ಸಮಸ್ಯೆಗಳು ಮಕ್ಕಳ ಬೆಳವಣಿಗೆ ಹಾಗೂ ಶಿಕ್ಷಣದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಮಕ್ಕಳ ಏಳಿಗೆಗೆ ಶ್ರಮಿಸುವ ಪ್ರತಿಯೊಬ್ಬರೂ ಕೈಜೋಡಿಸಿ ಮಕ್ಕಳ ಗ್ರಾಮಸಭೆ ಯಶಸ್ವಿಗೊಳಿಸೋಣ. ಸ್ವಸ್ಥ ಮಕ್ಕಳ ಕೂಟವನ್ನು ನಿರ್ಮಿಸೋಣ ಎಂದರು.
ಗ್ರಾಪಂ ಅಧ್ಯಕ್ಷೆ ಅಡಿವೆವ್ವ ಚೌಟಗಿ, ಕಾರ್ಯದರ್ಶಿ ಅಕ್ಬರ್ ಸಾಬ ಮಿಟಾಯಿ, ಅಂಗನವಾಡಿ ಮೇಲ್ವಿಚಾರಕಿ ರೆಹಮತ್ ಬಿ, ಪ್ರಮುಖರಾದ ಹನುಮೇಶ ಆವೋಜಿ, ಸಣ್ಣ ಹನುಮಪ್ಪ ತಂಬ್ರಹಳ್ಳಿ, ಯಮನೂರಪ್ಪ ಗಂಗಣ್ಣವರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net