ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ

ಹಿಟ್ನಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆ ಉಚಿತ ತರಬೇತಿ ಕಾರ್ಯಾಗಾರದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ರಾಜಣ್ಣ ಬಂಡಿಹಾಳ ಮಾತನಾಡಿದರು. ಸ್ಫೂರ್ತಿ ಸ್ಟಡಿ ಸೆಂಟರ್‌ನ ಗೌರವ ಮಾರ್ಗದರ್ಶಕ ಯಲ್ಲಾಲಿಂಗ ಕತ್ತಿ, ಪ್ರಾಚಾರ್ಯ ಡಾ. ರಮೇಶ ಎನ್., ಉಪನ್ಯಾಸಕರಾದ ಗಜೇಂದ್ರಗೌಡ, ಎರಿಸ್ವಾಮಿ, ಮಂಜುನಾಥ, ಸೋಮನಾಥ, ವಿಶ್ವನಾಥ, ಚಂದ್ರಶೇಖರ, ಆಂಜನೇಯ, ವೆಂಕಟೇಶ, ಪ್ರಿಯಾ ಮಲ್ಲೇಶಪ್ಪ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ರಾಜಣ್ಣ ಬಂಡಿಹಾಳ ಅಭಿಪ್ರಾಯ
  • ಮುನಿರಾಬಾದ್ ಹಿಟ್ನಾಳ ಉಚಿತ ಕಾರ್ಯಾಗಾರ
ಮುನಿರಾಬಾದ್: ಶ್ರದ್ಧೆ ಹಾಗೂ ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ ಎಂದು ಹಿಟ್ನಾಳ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ರಾಜಣ್ಣ ಬಂಡಿಹಾಳ ಹೇಳಿದರು.
ಸಮೀಪದ ಹಿಟ್ನಾಳ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊಪ್ಪಳ ಸ್ಫೂರ್ತಿ ಸ್ಟಡಿ ಸೆಂಟರ್ ಹಾಗೂ ಹಿಟ್ನಾಳ ಗ್ರಾಪಂ ಸಹಯೋಗದಲ್ಲಿ ಆಯೋಸಿರುವ ಮೂರು ದಿನಗಳ ಸ್ಪರ್ಧಾತ್ಮಕ ಪರೀಕ್ಷೆ ಉಚಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕೊರತೆ ಇದೆ. ಇಂತಹ ಕಾರ್ಯಾಗಾರ ಆಯೋಜಿಸಿ ವಿದ್ಯಾರ್ಥಿಗಳ ಕನಸಿಗೆ ನೀರೆರೆದು ಪೋಷಿಸುವ ಕೆಲಸವಾಗಬೇಕು. ಬಹುತೇಕ ಅಕ್ಷರಸ್ಥರ ಕನಸು ಸರ್ಕಾರಿ ನೌಕರಿ ಪಡೆಯುವುದಾಗಿದೆ. ಸರ್ಕಾರಿ ಹುದ್ದೆ ಅಲಂಕರಿಸುವುದು ಸುಲಭ ಮಾತಲ್ಲ. ಅದಕ್ಕೆ ನಿಯಮಿತ ಓದು, ಮಾರ್ಗದರ್ಶನ, ನಿಷ್ಠೆ ಬೇಕಾಗುತ್ತದೆ. ಉಪನ್ಯಾಸಕರ ಮಾರ್ಗದರ್ಶನ ಪಡೆದು ತಾವೆಲ್ಲ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಬೇಕು ಎಂದರು.
ಪ್ರಾಚಾರ್ಯ ಡಾ.ಬಸವರಾಜ ಟಿ.ಎಚ್.ಮಾತನಾಡಿ, ಸ್ಪರ್ಧಾ ಆಕಾಂಕ್ಷಿಗಳು ಮೊದಲು ಗುರಿ ನಿರ್ದಿಷ್ಟಪಡಿಸಿಕೊಳ್ಳಬೇಕು. ನಂತರ ನಿಮಗೆ ದಾರಿ ಕಾಣುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಾಳ್ಮೆ ಮುಖ್ಯ. ಒಂದೇ ಸಲ ಗೆಲುವು ನಿಮ್ಮದಾಗದೇ ಇರಬಹುದು. ನಿರಂತರ ಪರಿಶ್ರಮವಿದ್ದರೆ ಕನಸಿನ ಹುದ್ದೆ ಅಲಂಕರಿಸುವಿರಿ. ಯಶಸ್ಸಿನ ಬದುಕು ನಿಮ್ಮದಾಗಲಿ ಎಂದು ಆಶಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net