ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯ

ಬೈರಾಪುರದಲ್ಲಿ  ಭಗೀರಥ ಮಹರ್ಷಿ ಜಯಂತಿ ಆಚರಿಸಲಾಯಿತು.ಎಸ್‌ಡಿಎಮ್ಸಿ ಅಧ್ಯಕ್ಷ ಯಲ್ಲಪ್ಪ ಹರ್ನಾಳಗಿ, ಬಿಜೆಪಿ ಗ್ರಾಮೀಣ ಮಂಡಲದ ಉಪಾಧ್ಯಕ್ಷ ಬಸವರಡ್ಡಿ ರಡ್ದೆರ, ಮಾಜಿ ಗ್ರಾಪಂ ಸದಸ್ಯ ಪರಶುರಾಮ ಮೆಕ್ಕಿ, ಕನಕಪ್ಪ ಗುಮಗೋಳ, ಭೀಮಪ್ಪ ಕೊಪ್ಪಳ, ಗಿಡ್ಡಪ್ಪ ಕನಕಪುರ, ಪ್ರವೀಣ, ಭರಮಪ್ಪ, ಪರಶುರಾಮ, ಮಂಜುನಾಥ ಹಾದಿಮನಿ, ಮಲ್ಲಪ್ಪ ಸಿಂಧೋಗಿ ಇತರರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಸಮಾಜ
  • ಸೇವಕ
  • ಘೋರ
ಅಳವಂಡಿ: ಭಗೀರಥ ಮಹರ್ಷಿ ಅವರು ಸತತ ಪ್ರಯತ್ನ ಮತ್ತು ಘೋರ ತಪಸ್ಸಿನಿಂದ ಪವಿತ್ರ ಗಂಗೆಯನ್ನು ಭೂಮಿಗೆ ತಂದಿದ್ದು ಅವರ ದೃಢ ಸಂಕಲ್ಪ ಮತ್ತು ಸತತ ಪ್ರಯತ್ನದಿಂದ ಸಾಧ್ಯ ಎಂದು ಸಮಾಜ ಸೇವಕ ವೆಂಕಟೇಶ ಬ್ಯಾಡಗಿ ತಿಳಿಸಿದರು.
ಸಮೀಪದ ಬೈರಾಪುರ ಗ್ರಾಮದ ಶ್ರೀ ಭಗೀರಥ ಮಹರ್ಷಿ ವೃತ್ತದಲ್ಲಿ ಶನಿವಾರ ಆಯೋಜಿಸಿದ್ದ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಸತತ ಪ್ರಯತ್ನದಿಂದ ಅಸಾಧ್ಯವಾದುದನ್ನು ಸಾಧಿಸಬಹುದು ಎಂಬುದನ್ನು ಭಗೀರಥರು ತೊರಿಸಿಕೊಟ್ಟಿದ್ದಾರೆ ಎಂದರು.
ಗ್ರಾಪಂ ಮಾಜಿ ಸದಸ್ಯ ನಿಂಗಪ್ಪ ಮೇಟಿ ಮಾತನಾಡಿ, ಭಗೀರಥ ಮಹರ್ಷಿ ಘನ ಘೋರ ತಪಸ್ಸಿನ ಮೂಲಕ ಪವಿತ್ರ ಗಂಗೆಯನ್ನು ಶಿವನ ಜಡೆಯಿಂದ ಭೂಮಿಗೆ ತಂದ ಶ್ರೇಷ್ಠರು. ಪ್ರತಿಯೊಬ್ಬರೂ ಪರಿಶ್ರಮದ ಬದುಕು ಕಟ್ಟಿಕೊಳ್ಳಬೇಕು ಹಾಗೂ ಸಮಾಜದ ಹಿತಚಿಂತನೆ, ನಂಬಿಕೆಯ ಹಾದಿಯಲ್ಲಿ ನಡೆದು ಹೆಸರು ಸಂಪಾದಿಸಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net