ಕಾರ್ಖಾನೆ ಸಮಸ್ಯೆ ವರದಿ ಸಲ್ಲಿಕೆ

ಕೊಪ್ಪಳ ತಾಲೂಕಿನ ಬಗನಾಳ ಗ್ರಾಮಸ್ಥರೊಂದಿಗೆ ಜೆಡಿಎಸ್​ ನಿಯೋಗ ಸದಸ್ಯರು ಸೋಮವಾರ ಸಂವಾದ ನಡೆಸಿದರು. ಕೋರ್​ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ, ತಾಲೂಕು ಅಧ್ಯಕ್ಷ ವೀರೇಶ್​ ಗೌಡ, ನಗರ ಘಟಕದ ಅಧ್ಯಕ್ಷ ಸೋಮನಗೌಡ ಹೊಗರನಾಳ, ಎಸ್​ ಸಿ ಘಟಕದ ತಾಲೂಕು ಅಧ್ಯಕ್ಷ ಸುರೇಶ್​ ಪೂಜಾರ ಇದ್ದರು.
ಕೊಪ್ಪಳ ತಾಲೂಕಿನ ಬಗನಾಳ ಗ್ರಾಮಸ್ಥರೊಂದಿಗೆ ಜೆಡಿಎಸ್​ ನಿಯೋಗ ಸದಸ್ಯರು ಸೋಮವಾರ ಸಂವಾದ ನಡೆಸಿದರು. ಕೋರ್​ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ, ತಾಲೂಕು ಅಧ್ಯಕ್ಷ ವೀರೇಶ್​ ಗೌಡ, ನಗರ ಘಟಕದ ಅಧ್ಯಕ್ಷ ಸೋಮನಗೌಡ ಹೊಗರನಾಳ, ಎಸ್​ ಸಿ ಘಟಕದ ತಾಲೂಕು ಅಧ್ಯಕ್ಷ ಸುರೇಶ್​ ಪೂಜಾರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜೆಡಿಎಸ್​ ಕೋರ್​ ಕಮಿಟಿ ಸದಸ್ಯ ಸಿವಿಸಿ ಭರವಸೆ
  • ಬಾಧಿತ ಗ್ರಾಮಗಳಿಗೆ ಭೇಟಿ
ಕೊಪ್ಪಳ : ಕೈಗಾರಿಕೆಗಳಿಂದ ವಿವಿಧ ಗ್ರಾಮದ ಜನರು ಬಾಧಿತರಾಗಿದ್ದಾರೆ. ಈ ಬಗ್ಗೆ ಕೇಂದ್ರ ಬೃಹತ್​ ಕೈಗಾರಿಕೆ ಸಚಿವ ಎಚ್​.ಡಿ.ಕುಮಾರಸ್ವಾಮಿಗೆ ವರದಿ ಸಲ್ಲಿಸಲಾಗುವುದೆಂದು ಜೆಡಿಎಸ್​ ರಾಜ್ಯ ಕೋರ್​ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ಭರವಸೆ ನೀಡಿದರು.
ಕಾರ್ಖಾನೆ ಬಾಧಿತ ಗ್ರಾಮಗಳಿಗೆ ಸೋಮವಾರ ಭೇಟಿ ನೀಡಿ ಜನರೊಂದಿಗೆ ಸಂವಾದ ನಡೆಸಿ ಮಾತನಾಡಿದರು.
ಕೈಗಾರಿಕೆಗಳು ನಿಯಮ ಉಲ್ಲಂಘಿಸಿದ ಬಗ್ಗೆ ನಾನು ಮನವಿ ಸಲ್ಲಿಸಿದ್ದೆ. ಅದನ್ನು ಆಧರಿಸಿ ಕುಮಾರಸ್ವಾಮಿ ಅವರು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ಸಚಿವರಿಗೆ ಮನವಿ ಮಾಡಿ ಅಧ್ಯಯನಕ್ಕೆ ತಿಳಿಸಿದ್ದರು. ಅದರಂತೆ ಕೇಂದ್ರ ತಂಡ ಬಂದು ಅಧ್ಯಯನ ನಡೆಸಿ ವರದಿ ಸಲ್ಲಿಸಿದೆ. ಆದರೆ, ವರ್ಷವಾದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ನಮ್ಮ ನಿಯೋಗ ಬಗನಾಳ, ಕುಣಿಕೇರಿ, ಅಲ್ಲಾನಗರ ಸೇರಿ ಕಾರ್ಖಾನೆ ಬಾಧಿತ ಗ್ರಾಮಗಳಲ್ಲಿ ಸಂವಾದ ನಡೆಸಿ ಜನರಿಂದ ಮಾಹಿತಿ ಪಡೆದು ಮತ್ತೊಮ್ಮೆ ವಸ್ತುನಿಷ್ಠ ವರದಿ ಸಲ್ಲಿಸಲಿದೆ ಎಂದು ತಿಳಿಸಿದರು.
ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ ಮಾತನಾಡಿ, ಈ ಭಾಗದ ಕೃಷಿ ಅಪಾರ ನಷ್ಟವಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ರ್ನಿಲಕ್ಷ$್ಯವಹಿಸಿದ್ದಾರೆಂದು ಕಿಡಿ ಕಾರಿದರು. ಜಿಲ್ಲಾ ಉಪಾಧ್ಯಕ್ಷ ಮೂರ್ತೆಪ್ಪ ಗಿಣಿಗೇರಾ ಮಾತನಾಡಿ, ಕೊಪ್ಪಳದಲ್ಲಿನ ಕಾರ್ಖಾನೆಗಳು ನಿಯಮ ಪಾಲಿಸಿಲ್ಲ. ಜನಪ್ರತಿನಿಧಿಗಳು ಜನರನ್ನು ದೂರುವುದು ಸರಿಯಲ್ಲ. ಧೂಳು ನಿಯಂತ್ರಿಸದಿದ್ದರೆ ಇಲ್ಲಿಂದ ಒದ್ದು ಓಡಿಸಬೇಕಾಗುತ್ತದೆಂದು ಎಚ್ಚರಿಸಿದರು. ಜಿಲ್ಲಾ ಒಬಿಸಿ ಅಧ್ಯಕ್ಷ ಕರಿಯಪ್ಪ ಹಾಲವರ್ತಿ, ತಾಲೂಕು ಗೌರವ ಅಧ್ಯಕ್ಷ ಈಶಪ್ಪ ಮಾದಿನೂರ ಮಾತನಾಡಿದರು.
ಗ್ರಾಮಸ್ಥರು ತಾವು ಅನುಭವಿಸುತ್ತಿರುವ ಸಮಸ್ಯೆಗಳನ್ನು ಹೇಳಿಕೊಂಡರು. ಪರಿಹಾರ ಸಿಗದಿದ್ದರೆ ದಯಾಮರಣಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು. ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು. ಕೇಂದ್ರ ಮಧ್ಯ ಪ್ರವೇಶಿಸುವಂತೆ ಒತ್ತಾಯಿಸಿದರು.
ತಾಲೂಕು ಅಧ್ಯಕ್ಷ ವೀರೇಶ್​ ಗೌಡ, ನಗರ ಘಟಕದ ಅಧ್ಯಕ್ಷ ಸೋಮನಗೌಡ ಹೊಗರನಾಳ, ಎಸ್​ ಸಿ ಘಟಕದ ತಾಲೂಕು ಅಧ್ಯಕ್ಷ ಸುರೇಶ್​ ಪೂಜಾರ್​, ಜಿಲ್ಲಾ ಕೈಗಾರಿಕಾ ಅಧ್ಯಕ್ಷ ಮಾರುತಿ ಗೌಡ ಪೊಲೀಸ್​ ಪಾಟೀಲ್​, ನಗರ ಕಾನೂನು ಅಧ್ಯಕ್ಷ ಬಸವರಾಜ ಎಸ್​, ನಗರ ಉಪಾಧ್ಯಕ್ಷ ಗಂಗಾಧರ್​ ವಸ್ತ್ರದ , ನಗರ ಪರಿಸರ ಹಕ್ಕು ವಿಭಾಗದ ಅಧ್ಯಕ್ಷ ಪ್ರಾಣೇಶ್​ ಕಂಪ್ಲಿ ಇತರರಿದ್ದರು.
"

ಹಿರೇ ಬಗನಾಳದಲ್ಲಿ 2500 ಜನಸಂಖ್ಯೆ ಇದ್ದು, 220ಕ್ಕೂ ಹೆಚ್ಚು ಜನ ವಿವಿಧ ರೋಗಗಳಿಂದ ಬಳಲುತ್ತಿದ್ದಾರೆ. 25 ವರ್ಷದಿಂದ ಅಧಿಕಾರ ಅನುಭವಿಸುತ್ತಿರುವವರ ಕಣ್ಣಿಗೆ ಇಲ್ಲಿನ ಸಮಸ್ಯೆ ಬರದಿರುವುದು ದುರಂತ. ಕೇಂದ್ರದಿಂದ ಸಿಗಬಹುದಾದ ಎಲ್ಲ ಪರಿಹಾರ ಕೊಡಿಸಲು ಯತ್ನಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net