ಕಲಕೇರಿಯಲ್ಲಿ ನರೇಗಾ ಯೋಜನೆಯ ರೋಜಗಾರ್ ದಿವಸ ಕಾರ್ಯಕ್ರಮದಲ್ಲಿ ಜಿಪಂ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ ಮಾತನಾಡಿದರು. ತಾಪಂ ಸಂಯೋಜಕ ದೇವರಾಜ ಪತ್ತಾರ, ಡಿಇಒ ಕುಮಾರ ಪರಗಿ, ಮಾರುತಿ ವಾಲ್ಮೀಕಿ, ರಾಧಾ, ನಾಗರಾಜ ಮಲಾಜಿ ಇದ್ದರು.
ಕೊಪ್ಪಳ : ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಎಲ್ಲಾ ಕೂಲಿಕಾರರು ಫಾರಂ ನಂ.6 ಸಲ್ಲಿಸುವ ಮೂಲಕ ಕೂಲಿ ಕೆಲಸಕ್ಕೆ ಹಾಜರಾಗುವಂತೆ ಜಿಪಂ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ ಹೇಳಿದರು.
ತಾಲೂಕಿನ ಕಲಕೇರಿ ಗ್ರಾಂಪಂನಿಂದ ಮಂಗಳವಾರ ಗ್ರಾಮದ ಸಂತ ಷರೀಪ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ ರೋಜಗಾರ್ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ ಮನುಷ್ಯನಿಗೆ ದಿನಕ್ಕೆ ರೂ. 370 ಕೂಲಿ ನಿಗದಿಪಡಿಸಿದ್ದು, ಸಂಪೂರ್ಣ ಕೂಲಿ ಮಾಡು ಪೂರ್ತಿ ಹಣ ಪಡೆದುಕೊಳ್ಳಬೇಕು. ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು ಕೆಲಸದ ಜೊತೆಗೆ ಆರೋಗ್ಯ ಕಡೆ ಕಾಳಜಿವಹಿಸಬೇಕು. 18 ವರ್ಷ ಮೇಲ್ಪಟ್ಟ ಕುಟುಂಬದ ಸದಸ್ಯರು ಜಾಬಕಾರ್ಡ ಬಳಕೆ ಮಾಡಿಕೊಳ್ಳಿ. ಕೆಲಸ ಪಡೆಯಲು ಕಡ್ಡಾಯವಾಗಿ ನಮೂನೆ -6 ಸಲ್ಲಿಸಿ, ಮೇ ಯಿಂದ ಜೂನ್ ವರೆಗೆ 60 ದಿನಗಳ ಕೂಲಿ ಕೆಲಸ ಪಡೆಯಿರಿ. ಕೂಲಿ ಹಣದಿಂದ ಮಕ್ಕಳ ಶಾಲಾ, ಕಾಲೇಜು ಶುಲ್ಕ ಭರಿಸಲು, ಮಕ್ಕಳ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಗೂ ಕುಟುಂಬ ನಿರ್ವಹಣೆಗೆ ಅನುಕೂಲವಾಗುತ್ತದೆ ಎಂದರು.
ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ ಮಾತನಾಡಿ, ಪ್ರತಿ ಜಾಬಕಾರ್ಡಗೆ 100 ದಿನಗಳ ಕೂಲಿ ಕೆಲಸ ನೀಡಲಾಗುತ್ತಿದ್ದು, ಇದರ ಸದುಪಯೋಗ ಪಡೆಯಬೇಕು. ಗ್ರಾಮೀಣ ಭಾಗದ ಕೂಲಿಕಾರರು ಕೂಲಿ ಅರಸಿ ಗುಳೆ ಹೋಗುವದನ್ನು ನಿಯಂತ್ರಿಸಿ ಸ್ಥಳಿಯವಾಗಿ ಉದ್ಯೋಗ ಒದಗಿಸಿ ಅವರಿಗೆ ಕೂಲಿ ಹಣ ಪಾವತಿಸಿ ಸ್ವಾವಂಬಿ ಜೀವನ ನಡೆಸುಂತ್ತೆ ಮಾಡುವುದು ಈ ಯೋಜನೆಯ ಸದುದ್ದೇಶವಾಗಿದೆ. ಎಲ್ಲಾ ಕೂಲಿಕಾರರು ಸಾಮಾಜಿಕ ಭದ್ರತೆ ವಿಮೆಗಳಾದ ಪಿಎಂಜೆಜೆಬಿವೈ, ಪಿಎಂಎಸ್ಬಿವೈ.ಗಳಲ್ಲಿ ನೊಂದಣಿ ಮಾಡಿಕೊಳ್ಳುವಂತೆ ತಿಳಿಸಿದರು.