ಎನ್ಯೂಮರೇಷನ್​ ಫಾರಂ ತ್ವರಿತವಾಗಿ ಸಲ್ಲಿಸಿ

ಮಂಜುನಾಥ ಗುಂಡೂರು
ಮಂಜುನಾಥ ಗುಂಡೂರು
Published on

ಪ್ರಮುಖ ಮುಖ್ಯಾಂಶಗಳು

  • ಮಂಜುನಾಥ ಗುಂಡೂರು ಮನವಿ
ಕೊಪ್ಪಳ : ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯದ ಅಂಗವಾಗಿ ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಮತದಾರರ ಅನುಕೂಲಕ್ಕಾಗಿ 10 ಮತದಾರರ ಸಹಾಯ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಪೌರಾಯುಕ್ತ ಮಂಜುನಾಥ ಗುಂಡೂರ್​ ತಿಳಿಸಿದ್ದಾರೆ.
ನಗರ ವ್ಯಾಪ್ತಿಯ ಬೂತ್​ ಮಟ್ಟದ ಅಧಿಕಾರಿಗಳು ಈಗಾಗಲೇ ಮನೆ ಮನೆಗೆ ಭೇಟಿ ನೀಡಿ ಎನ್ಯೂಮರೇಷನ್​ ಫಾರಂಗಳನ್ನು ವಿತರಿಸಿದ್ದು, ಮತದಾರರು ಅವುಗಳನ್ನು ಸರಿಯಾದ ಮಾಹಿತಿಯೊಂದಿಗೆ ಭರ್ತಿ ಮಾಡಿ ತಮ್ಮ ವ್ಯಾಪ್ತಿಯ ಬಿಎಲ್​ಒಗಳಿಗೆ ಶೀಘ್ರ ಸಲ್ಲಿಸಿ ಸ್ವೀಕೃತಿ ಪಡೆಯಬೇಕು. ಫಾರಂ ಭರ್ತಿ ಮಾಡುವ ವೇಳೆ ಯಾವುದೇ ಮಾಹಿತಿ ಅಥವಾ ತಾಂತ್ರಿಕ ಸಹಾಯ ಅಗತ್ಯವಿದ್ದಲ್ಲಿ ಸಂಬಂಧಿಸಿದ ಬಿಎಲ್​ಒಗಳನ್ನು ಸಂಪರ್ಕಿಸಿ, ಸಮೀಪದ ಮತದಾರರ ಸಹಾಯ ಕೇಂದ್ರದಲ್ಲಿಯೂ ನೆರವು ಪಡೆಯಬಹುದು. ಯಾರಿಗಾದರೂ ಎನ್ಯೂಮರೇಷನ್​ ಫಾರಂ ತಲುಪದಿದ್ದರೆ ನಗರಸಭೆಗೆ ದೂರು ದಾಖಲಿಸಬಹುದಾಗಿದೆ.
ನಗರಸಭೆ ವ್ಯಾಪ್ತಿಯಲ್ಲಿ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ, ನಿರ್ಮಿತಿ ಕೇಂದ್ರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬ್ರಹ್ಮನವಾಡಿ, ಅಂಬೇಡ್ಕರ್​ ಭವನ ಸಮೀಪ, ತಾಪಂ ಕಚೇರಿ, ನಗರಸಭೆ ಕಚೇರಿ, ಹೊಸ ಬಸ್​ ನಿಲ್ದಾಣ ಎದುರಿನ ನಗರಸಭೆ ವಾಣಿಜ್ಯ ಸಂಕೀರ್ಣ, ತೋಟಗಾರಿಕೆ ಇಲಾಖೆ ಕಚೇರಿ, ಜೆಸ್ಕಾಂ ಕಾರ್ಯಪಾಲಕ ಅಭಿಯಂತರರ ಕಚೇರಿ ಹಾಗೂ ಬಸವೇಶ್ವರ ವೃತ್ತದ ಸಮೀಪದ ಪಿ.ಸಿ.ಎ. ಮತ್ತು ಆರ್​.ಡಿ. ಬ್ಯಾಂಕ್​ ಕಟ್ಟಡ ಸೇರಿದಂತೆ ಒಟ್ಟು 10 ಕೇಂದ್ರಗಳಲ್ಲಿ ಸೇವೆ ಲಭ್ಯವಿದೆ.
ನಿಗದಿತ ಅವಧಿಯೊಳಗೆ ಭರ್ತಿ ಮಾಡಿದ ಎನ್ಯೂಮರೇಷನ್​ ಫಾರಂ ಸಲ್ಲಿಸದಿದ್ದರೆ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವ ಸಾಧ್ಯತೆ ಇರುವುದರಿಂದ, ಮತದಾನದ ಹಕ್ಕು ಕಳೆದುಕೊಳ್ಳದಂತೆ ಎಲ್ಲ ಅರ್ಹ ಮತದಾರರು ಬಿಎಲ್​ಒ ಅಥವಾ ಸಮೀಪದ ಸಹಾಯ ಕೇಂದ್ರವನ್ನು ಸಂಪರ್ಕಿಸಿ ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸುವಂತೆ. ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net