ಸ್ವಂತ ಖರ್ಚಿನಲ್ಲಿ ಬಣ್ಣ ಬಳಿದ ವಿದ್ಯಾರ್ಥಿಗಳು

ಕೊಠಡಿಗಳಿಗೆ ಮಕ್ಕಳು ಸ್ವ-ಇಚ್ಛೆಯಿಂದ ಬಣ್ಣ ಹಚ್ಚಿರುವುದರಿಂದ ಅಂದದಿಂದ ಕಾಣುತ್ತಿರುವ ಕನಕಗಿರಿಯ ಕೆಪಿಎಸ್ (ಪ್ರೌಢ) ಶಾಲೆ.
ಕೊಠಡಿಗಳಿಗೆ ಮಕ್ಕಳು ಸ್ವ-ಇಚ್ಛೆಯಿಂದ ಬಣ್ಣ ಹಚ್ಚಿರುವುದರಿಂದ ಅಂದದಿಂದ ಕಾಣುತ್ತಿರುವ ಕನಕಗಿರಿಯ ಕೆಪಿಎಸ್ (ಪ್ರೌಢ) ಶಾಲೆ.
Published on

ಪ್ರಮುಖ ಮುಖ್ಯಾಂಶಗಳು

  • ಸಾಮಗ್ರಿ
  • ರೂಪದಲ್ಲಿ
  • ಶಾಲೆಗೆ
ಕನಕಗಿರಿ: 10ನೇ ತರಗತಿ ವಿದ್ಯಾಭ್ಯಾಸ ಪೂರ್ಣಗೊಳಿಸುವ ಹಂತಕ್ಕೆ ತಲುಪಿರುವ ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆ (ಪ್ರೌಢ) ವಿಭಾಗದ ವಿದ್ಯಾರ್ಥಿಗಳು ಕಲಿತ ಶಾಲೆಗೆ ಸ್ವಂತ ಹಣದಿಂದ ತಾವೇ ಸುಣ್ಣ-ಬಣ್ಣ ಬಳಿದು ಮಾದರಿಯಾಗಿದ್ದಾರೆ. 10ನೇ ತರಗತಿಯಲ್ಲಿಯೇ 342 ಮಕ್ಕಳಿದ್ದು, ಅದರಲ್ಲಿ ಕನಿಷ್ಠ 245 ವಿದ್ಯಾರ್ಥಿಗಳು ನಿತ್ಯ ಶಾಲೆಗೆ ಹಾಜರಾಗುತ್ತಾರೆ.
ಶಾಲೆಯಿಂದ ಹೊರ ಹೋಗುವುದರೊಳಗೆ ತಾವು ಕಲಿತ ಶಾಲೆಗೆ ಕಾಣಿಕೆ ಕೊಡಬೇಕು ಎನ್ನುವ ಯೋಚನೆ ಬಂದಿದೆ. ಇದಕ್ಕೆ ಎಲ್ಲ ವಿದ್ಯಾರ್ಥಿಗಳು ಸಮ್ಮತಿಸಿದ್ದು, ಇಂತಿಷ್ಟು ಹಣ ಎಂದು ಸ್ವ-ಇಚ್ಛೆಯಿಂದ ಕ್ರೋಢೀಕರಿಸಿದ್ದು, ಅದು 20 ಸಾವಿರ ರೂ. ಆಗಿದೆ. ಈ ಹಿಂದಿನ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳು ಸಾಮಗ್ರಿಗಳ ರೂಪದಲ್ಲಿ ಶಾಲೆಗೆ ಕಾಣಿಕೆ ನೀಡಿದ್ದಾರೆ.
ಅದಕ್ಕೂ ಭಿನ್ನವಾಗಿ ಸ್ಮರಿಸುವಂತೆ ಕಾಣಿಕೆ ನೀಡಬೇಕೆಂದುಕೊಂಡಾಗ ಹಲವು ವರ್ಷಗಳಿಂದ ಸುಣ್ಣ ಬಣ್ಣ ಕಾಣದ ಶಾಲೆಗಳ ಕೊಠಡಿಗಳಿಗೆ ಬಣ್ಣ ಬಳಿಯುವ ಯೋಚನೆ ಬಂದಿದೆ. ತಕ್ಷಣವೇ ಬಣ್ಣ ಖರೀದಿಸಿ ತಂದು ವಿದ್ಯಾರ್ಥಿಗಳು, ಅದನ್ನು ಹಚ್ಚಲು ಕಾರ್ಮಿಕರಿಗೆ ಕೂಲಿ ನೀಡಲು ಹಣವಿಲ್ಲದಕ್ಕೆ ತಾವೂ ಬಣ್ಣ ಬಳಿದು ಶಾಲೆಯ ಅಂದ ಹೆಚ್ಚಿಸಿದ್ದಾರೆ.
"

ಎಸ್ಸೆಸ್ಸೆಲ್ಸಿಸಿ ಮುಗಿಸುವ ಹಂತಕ್ಕೆ ಬಂದಿದ್ದೇವೆ. ಶಾಲೆಯಿಂದ ಹೊರಗೆ ಹೋಗುತ್ತಿರುವಾಗ ಶಾಲೆಗೆ ಕಾಣಿಕೆ ನೀಡುವ ಸಲುವಾಗಿ ಇಂಥ ಯೋಚನೆ ಬಂದಿತು. ಇದಕ್ಕೆಲ್ಲ ಸ್ನೇಹಿತರು ಒಪ್ಪಿದ್ದು, ಶಿಕ್ಷಕರ ಸಹಕಾರದಿಂದ ಶಾಲಾ ತರಗತಿಗಳಿಗೆ ಬಣ್ಣ ಹಚ್ಚಿದ್ದೇವೆ.

"

ನಮ್ಮ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳು ತಾವೇ ಹಣ ಸಂಗ್ರಹಿಸಿ ಸ್ವ-ಇಚ್ಛೆಯಿಂದ ತರಗತಿ ಕೊಠಡಿಗಳಿಗೆ ಹಣ್ಣ ಹಚ್ಚಿದ್ದಾರೆ. ಶಾಲೆಯಲ್ಲಿ ಕಲಿತ ಮಕ್ಕಳು ಶಾಲೆಯ ಋಣ ತೀರಿಸುವ ಸತ್ಕಾರ್ಯ ಮಾಡಿರುವುದು ಶಾಲಾ ಆಡಳಿತ ಮಂಡಳಿಗೆ ಖುಷಿ ತಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net