ಪ್ರಜಾಪ್ರಭುತ್ವ ವ್ಯವಸ್ಥೆ, ಚುನಾವಣಾ ಪ್ರಕ್ರಿಯೆ ಹಾಗೂ ನಾಯಕತ್ವದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುವ ಉದ್ದೇಶದಿಂದ ಹುಲೇಗುಡ್ಡ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ ಶನಿವಾರ ನಡೆಯಿತು.
ಮೊಬೈಲ್ ಆಧಾರಿತ ಇವಿಎಂ ಮಾದರಿಯ ಮತದಾನ ವ್ಯವಸ್ಥೆಯನ್ನು ಬಳಸಿಕೊಂಡು ಚುನಾವಣೆ ನಡೆಸಲಾಯಿತು. ವಿದ್ಯಾರ್ಥಿಗಳು ಆಧಾರ್ ಕಾರ್ಡ್‌ಗಳನ್ನು ತೋರಿಸಿ, ಮತ ಚಲಾಯಿಸುವ ಮೂಲಕ ನೈಜ ಚುನಾವಣೆಯ ಅನುಭವ ಪಡೆದರು.
ಮತದಾನದಿಂದ ಮತ ಎಣಿಕೆವರೆಗಿನ ಎಲ್ಲ ಪ್ರಕ್ರಿಯೆಯನ್ನು ಪ್ರಜಾಪ್ರಭುತ್ವದ ಮಾದರಿಯಲ್ಲೇ ನಡೆಸಿ, ಮತದಾನದ ಹಕ್ಕು ಮತ್ತು ಜವಾಬ್ದಾರಿಯ ಕುರಿತು ಮಕ್ಕಳಿಗೆ ಅರಿವು ಮೂಡಿಸಲಾಯಿತು. ಶಾಲಾ ಸಂಸತ್ತಿನ ವಿವಿಧ ಸಚಿವ ಸ್ಥಾನಗಳಿಗೆ ವಿದ್ಯಾರ್ಥಿಗಳು ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಂಡರು. ಪ್ರಧಾನಮಂತ್ರಿಯಾಗಿ ಕುದುರೆಲ್ಲಪ್ಪ ಬಂಡ್ಲಿ ಆಯ್ಕೆಯಾದರು.