ವಿದ್ಯಾರ್ಥಿಗಳಿಗೆ ಗಣಿತದ ಭಯ ಸಲ್ಲ

ಅಳವಂಡಿ ಸಮೀಪದ ಬೆಟಗೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನದ ನಿಮಿತ್ತ ರಾಷ್ಟ್ರೀಯ ಗಣಿತ ದಿನ ಕಾರ್ಯಕ್ರಮ ನಡೆಯಿತು. ಮುಖ್ಯ ಶಿಕ್ಷಕ ಪರಶುರಾಮ, ಶಿಕ್ಷಕರಾದ ಗಿರಿಯಪ್ಪ, ರವಿಕಿರಣ, ಮರ್ದಾನಲಿ ಇತರರು ಇದ್ದರು.
ಅಳವಂಡಿ ಸಮೀಪದ ಬೆಟಗೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನದ ನಿಮಿತ್ತ ರಾಷ್ಟ್ರೀಯ ಗಣಿತ ದಿನ ಕಾರ್ಯಕ್ರಮ ನಡೆಯಿತು. ಮುಖ್ಯ ಶಿಕ್ಷಕ ಪರಶುರಾಮ, ಶಿಕ್ಷಕರಾದ ಗಿರಿಯಪ್ಪ, ರವಿಕಿರಣ, ಮರ್ದಾನಲಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಕ
  • ಮರ್ದಾನಲಿ
  • ಹೇಳಿಕೆ
ಅಳವಂಡಿ: ಶ್ರೀನಿವಾಸ ರಾಮಾನುಜನ್ ಶ್ರೇಷ್ಠ ಗಣಿತಜ್ಞರಾಗಿದ್ದು ಚಿಕ್ಕ ವಯಸ್ಸಿನಲ್ಲೇ ಅಪ್ರತಿಮ ಸಾಧನೆ ಮಾಡಿದ್ದರು ಎಂದು ಗಣಿತ ಶಿಕ್ಷಕ ಮರ್ದಾನಲಿ ಗಡಾದ ತಿಳಿಸಿದರು.
ಬೆಟಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನದ ನಿಮಿತ್ತ ಆಯೋಜಿಸಿದ್ದ ರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಸೋಮವಾರ ಮಾತನಾಡಿದರು.
ನಿತ್ಯ ಜೀವನದಲ್ಲಿ ಗಣಿತದ ಜ್ಞಾನ ಪ್ರತಿಯೊಂದು ವ್ಯವಹಾರಕ್ಕೂ ಬೇಕೇ ಬೇಕು, ಇದರ ಹೊರತಾಗಿ ಜೀವನ ನಡೆಸುವುದು ಅಸಾಧ್ಯ. ವಿದ್ಯಾರ್ಥಿಗಳಿಗೆ ಗಣಿತದ ಬಗ್ಗೆ ಇರುವ ಭಯ ಹೋಗಲಾಡಿಸಿ ಆತ್ಮವಿಶ್ವಾಸ ತುಂಬಿ 10ನೇ ತರಗತಿಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಶಿಕ್ಷಣ ಇಲಾಖೆ ತೆಗೆದುಕೊಂಡ ಮಿಷನ್ 40+ಅನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಸೂತ್ರಗಳ ಸ್ಪರ್ಧೆ, ಮುಖ್ಯ ಪ್ರಶ್ನೆ ಬಿಡಿಸುವ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸುವುದಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಮುಖ್ಯ ಶಿಕ್ಷಕ ಪರಶುರಾಮ ಸಾಲ್ಮನಿ ಮಾತನಾಡಿ, ಗಣಿತ ಕಬ್ಬಿಣದ ಕಡಲೆಯಲ್ಲ . ಸತತ ಪರಿಶ್ರಮ ಹಾಗೂ ಅಭ್ಯಾಸದಿಂದ ಉತ್ತಮ ಅಂಕ ಗಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಮಕ್ಕಳು ಪ್ರಯತ್ನಿಸಬೇಕು ಎಂದರು.
ಪೋಸ್ಟ್ ಕಾರ್ಡ್‌ನಲ್ಲಿ ಸೂತ್ರಗಳನ್ನು ಬರೆದು ಕಂಠಪಾಠ ಮಾಡುವ ಸ್ಪರ್ಧೆ, 8 ಮತ್ತು 9ನೇ ತರಗತಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಲಾಯಿತು.
ಶಿಕ್ಷಕರಾದ ಗಿರಿಯಪ್ಪ ಹಾರನಹಳ್ಳಿ, ರವಿಕಿರಣ ಟಿಕಾರೆ, ರಾಜಾಸಾಬ ಬಳಿಗಾರ, ಪ್ರಕಾಶರೆಡ್ಡಿ ಗೋವಿಂದರೆಡ್ಡಿ, ನಾರಾಯಣಪ್ಪ ಬಿಸನಳ್ಳಿ, ಶಾಂತವೀರಯ್ಯ ಕಳ್ಳಿಮಠ, ಸುನೀತಾ ಯಾಳಗಿ, ಶ್ವೇತಾ ಹುಲ್ಲೂರ, ಪರಶುರಾಮ ಯಡವಟ್ಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net