ವಿದ್ಯಾರ್ಥಿಗಳಿಗೆ ತೆರಿಗೆ ಕಾಯ್ದೆಗಳ ಅರಿವು ಅವಶ್ಯ

ಯಲಬುರ್ಗಾದ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಆಯೋಜಿಸಿದ್ದ ಜಿಎಸ್‌ಟಿ 2.0 ಮತ್ತು ಆದಾಯ ತೆರಿಗೆ ಕಾಯ್ದೆ-2025 ಕುರಿತ ಕಾರ್ಯಾಗಾರವನ್ನು ಕೊಪ್ಪಳ ವಿವಿ ಕುಲಪತಿ ಪ್ರೊ.ಎಸ್.ವಿ. ಡಾಣಿ ಉದ್ಘಾಟಿಸಿದರು. ನರ್ಸಿಂಗ್ ಕಾಲೇಜು ಪ್ರಾಚಾರ್ಯ ಎಚ್.ರಾಮದುರ್ಗಾ, ಪ್ರಮುಖರಾದ ಪ್ರತಿಭಾ ಹಿರೇಮಠ, ಅಲ್ತಾಫ್ ಹುಸೇನ್, ಪಡಿಯಪ್ಪ, ರವಿ ಚಳ್ಳಾರಿ, ಉಮೇಶ್, ಶ್ರುತಿ, ದೇವಪ್ಪ ಬಂಡ್ಲೇರ ಇತರರಿದ್ದರು.
ಯಲಬುರ್ಗಾದ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಆಯೋಜಿಸಿದ್ದ ಜಿಎಸ್‌ಟಿ 2.0 ಮತ್ತು ಆದಾಯ ತೆರಿಗೆ ಕಾಯ್ದೆ-2025 ಕುರಿತ ಕಾರ್ಯಾಗಾರವನ್ನು ಕೊಪ್ಪಳ ವಿವಿ ಕುಲಪತಿ ಪ್ರೊ.ಎಸ್.ವಿ. ಡಾಣಿ ಉದ್ಘಾಟಿಸಿದರು. ನರ್ಸಿಂಗ್ ಕಾಲೇಜು ಪ್ರಾಚಾರ್ಯ ಎಚ್.ರಾಮದುರ್ಗಾ, ಪ್ರಮುಖರಾದ ಪ್ರತಿಭಾ ಹಿರೇಮಠ, ಅಲ್ತಾಫ್ ಹುಸೇನ್, ಪಡಿಯಪ್ಪ, ರವಿ ಚಳ್ಳಾರಿ, ಉಮೇಶ್, ಶ್ರುತಿ, ದೇವಪ್ಪ ಬಂಡ್ಲೇರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೊಪ್ಪಳ ವಿವಿ ಕುಲಪತಿ ಪ್ರೊ.ಎಸ್.ವಿ.ಡಾಣಿ ಸಲಹೆ
  • ಜಿಎಸ್‌ಟಿ 2.0 ಕುರಿತು ಕಾರ್ಯಾಗಾರ
ಯಲಬುರ್ಗಾ: ವಿದ್ಯಾರ್ಥಿಗಳಿಗೆ ಆರ್ಥಿಕ ಮತ್ತು ವ್ಯಾಪಾರ ವ್ಯವಸ್ಥೆಯಲ್ಲಿ ತೆರಿಗೆ ಕಾಯ್ದೆಗಳ ಅರಿವು ಅಗತ್ಯವಾಗಿದ್ದು, ವಿಶೇಷವಾಗಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಜಿಎಸ್‌ಟಿ ಹಾಗೂ ಆದಾಯ ತೆರಿಗೆ ಕಾಯ್ದೆಗಳ ಕುರಿತು ಸಮಗ್ರವಾಗಿ ತಿಳಿಯಬೇಕು ಎಂದು ಕೊಪ್ಪಳ ವಿವಿ ಕುಲಪತಿ ಪ್ರೊ.ಎಸ್.ವಿ. ಡಾಣಿ ಹೇಳಿದರು.
ಪಟ್ಟಣದ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ಜಿಎಸ್‌ಟಿ 2.0 ಮತ್ತು ಆದಾಯ ತೆರಿಗೆ ಕಾಯ್ದೆ-2025 ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ ಆರ್ಥಿಕ, ಕಾನೂನು ಹಾಗೂ ಆಡಳಿತಾತ್ಮಕ ವಿಷಯಗಳ ಬಗ್ಗೆ ತಿಳಿಯಬೇಕು. ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ತೆರಿಗೆ ನೀತಿ ಪ್ರಮುಖ ಪಾತ್ರವಹಿಸುತ್ತದೆ. ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ವಿದ್ಯಾರ್ಥಿಗಳಿಗೆ ಜಿಎಸ್‌ಟಿ ಹಾಗೂ ಆದಾಯ ತೆರಿಗೆ ಕಾಯ್ದೆಗಳ ಜ್ಞಾನ ಭವಿಷ್ಯದ ಉದ್ಯೋಗ ಹಾಗೂ ವೃತ್ತಿ ಜೀವನದಲ್ಲಿ ಸಹಕಾರಿಯಾಗಲಿದೆ.
ಬ್ಯಾಂಕಿಂಗ್, ಲೆಕ್ಕಪತ್ರ, ಆಡಿಟ್, ಹಣಕಾಸು ನಿರ್ವಹಣೆ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ತೆರಿಗೆ ಜ್ಞಾನ ಮುಖ್ಯ ಎಂದರು.
ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ತೆರಿಗೆ ಆದಾಯವೇ ಮೂಲವಾಗಿದೆ.
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಆರ್ಥಿಕ ವ್ಯವಸ್ಥೆ ವೇಗವಾಗಿ ಬೆಳೆಯುತ್ತಿದ್ದು, ಜಿಎಸ್‌ಟಿ ವ್ಯವಸ್ಥೆ ತಂತ್ರಜ್ಞಾನಕ್ಕೆ ತಕ್ಕಂತೆ ಬದಲಾಗುತ್ತಿದೆ. ವಿದ್ಯಾರ್ಥಿಗಳು ಹೊಸ ಆರ್ಥಿಕ ನೀತಿಗಳು ಹಾಗೂ ತೆರಿಗೆ ವ್ಯವಸ್ಥೆಗಳ ಕುರಿತು ನಿರಂತರವಾಗಿ ಅಧ್ಯಯನ ಮಾಡಬೇಕು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಡಾ.ವಿ.ಪಾಂಡುರಂಗ, ಡಾ.ಹೊಸಮನಿ ಮಂಜುನಾಥ ಮಾತನಾಡಿ, ಜಿಎಸ್‌ಟಿ 2.0 ವ್ಯವಸ್ಥೆಯ ಹೊಸ ನಿಯಮಗಳು, ವ್ಯಾಪಾರ ವಲಯದ ಬದಲಾವಣೆಗಳು, ಡಿಜಿಟಲ್ ತೆರಿಗೆ ಪಾವತಿ ವಿಧಾನ, ಇ-ಇನ್ವಾಯ್ಸಾ ವ್ಯವಸ್ಥೆ, ಆದಾಯ ತೆರಿಗೆ ಸಲ್ಲಿಕೆ ಕ್ರಮಗಳು ಹಾಗೂ ಉದ್ಯಮಿಗಳಿಗಿರುವ ನಿಯಮಗಳ ಕುರಿತು ಮಾಹಿತಿ ನೀಡಿದರು.
ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಎಚ್.ರಾಮದುರ್ಗಾ, ಪ್ರಮುಖರಾದ ಪ್ರತಿಭಾ ಹಿರೇಮಠ, ಅಲ್ತಾಫ್ ಹುಸೇನ್, ಪಡಿಯಪ್ಪ, ರವಿ ಚಳ್ಳಾರಿ, ಉಮೇಶ್, ಶ್ರುತಿ, ಕಾವ್ಯಾ, ಕರಿಷ್ಮಾ, ಪಮೀದಾ, ದೇವಪ್ಪ ಬಂಡ್ಲೇರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net