ಯಲಬುರ್ಗಾ ಪಟ್ಟಣದಲ್ಲಿ ಆಯೋಜಿಸಿದ ಮಕ್ಕಳ ಹಕ್ಕುಗಳ ರಕ್ಷಣೆ ಜಾಗೃತಿ ಕಾರ್ಯಕ್ರಮವನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ಜಿ. ರಾಮತ್ನಾಳ ಉದ್ಘಾಟಿಸಿದರು. ಯಲಬುರ್ಗಾ ತಹಶೀಲ್ದಾರ್ ಮುರಳೀದರರಾವ್ ಕುಲಕರ್ಣಿ, ತಾ.ಪಂ ಇಒ ನೀಲಗಂಗಾ ಬಬಲಾದಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೆಟ್ಟದೇಶ ಮಾಳೆಕೊಪ್ಪ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶೇಖರಗೌಡ ರಾಮತ್ನಾಳ ಎಚ್ಚರಿಕೆ
ಕೊಪ್ಪಳ : ಜಿಲ್ಲೆಯಲ್ಲಿ ಬಾಲ್ಯವಿವಾಹ ಮತ್ತು ಬಾಲಗರ್ಭಿಣಿಯರ ಪ್ರಮಾಣ ರಾಜ್ಯದ ಸರಾಸರಿಗಿಂತ ಹೆಚ್ಚಿರುವುದು ಆತಂಕಕಾರಿ ವಿದ್ಯಮಾನವಾಗಿದೆ. ಇದನ್ನು ತಡೆಗಟ್ಟಲು ಅಧಿಕಾರಿಗಳು ಸಕ್ರಿಯವಾಗಿ ಕೆಲಸ ಮಾಡಬೇಕು, ಇಲ್ಲದಿದ್ದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಜಿ. ರಾಮತ್ನಾಳ ಎಚ್ಚರಿಸಿದರು.
ಜಿಲ್ಲೆಯ ಯಲಬುರ್ಗಾ ಪಟ್ಟಣದ ಡಾ. ಬಾಬು ಜಗಜೀವನರಾವ್ ಸಮುದಾಯ ಭವನದಲ್ಲಿ ಇತ್ತೀಚಿಗೆ ಅಯೋಜಿಸಿದ ಮಕ್ಕಳ ಹಕ್ಕುಗಳ ರಕ್ಷಣೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ 18 ವರ್ಷದೊಳಗೆ ಮದುವೆಯಾದ ಮಹಿಳೆಯರ ಪ್ರಮಾಣ ಶೇ. 27.1 ರಷ್ಟಿದ್ದು, ಇದು ರಾಜ್ಯದ ಸರಾಸರಿಗಿಂತ ಶೇ. 6ರಷ್ಟು ಹೆಚ್ಚಿದೆ. ಬಾಲಗರ್ಭಿಣಿಯರ ಪ್ರಮಾಣವು ರಾಜ್ಯದ ಸರಾಸರಿಗಿಂತ ಅಧಿಕವಾಗಿ ಶೇ.8.5 ರಷ್ಟಿದೆ ಎಂದು ರಾಮತ್ನಾಳ ಕಳವಳ ವ್ಯಕ್ತಪಡಿಸಿದರು.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು 2019ರ ತಿದ್ದುಪಡಿ ಅನ್ವಯ ಅಪರಾಧಿಗಳಿಗೆ ಕನಿಫ್ಠಿ 20 ವರ್ಫಿದಿಂದ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ. ಅಪ್ರಾಪ್ತ ಪತ್ನಿಯೊಂದಿಗಿನ ಲೈಂಗಿಕ ಸಂಪರ್ಕವೂ ಕಾನೂನಿನ ಪ್ರಕಾರ ಅಪರಾಧವಾಗಿದೆ. ಬಾಲ್ಯವಿವಾಹ ನಿಫಿೇಧಾಧಿಕಾರಿಗಳು ಕರ್ತವ್ಯದಲ್ಲಿ ರ್ನಿಲಕ್ಷ್ಯ ತೋರಿದರೆ, ಸುಪ್ರೀಂ ನಿರ್ದೇಶನದಂತೆ ಭಾರತೀಯ ಸುರಕ್ಷಿತಾ ಸಂಹಿತೆ 199(ಸಿ) ಅಡಿಯಲ್ಲಿ ಶಿಸ್ತು ಕ್ರಮಕ್ಕಾಗಿ ಶಿಫಾರಸು ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.
ಜಾಗೃತಿಗೆ ಕರೆ
ಸಮುದಾಯದಲ್ಲಿ ಮತ್ತು ಪಾಲಕರಲ್ಲಿ ಕಾನೂನಿನ ಅರಿವು ಮೂಡಿಸುವ ಮೂಲಕ ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕೆಂದು ಅವರು ಮನವಿ ಮಾಡಿದರು.
ಯಲಬುರ್ಗಾ ತಹಶೀಲ್ದಾರ್ ಮುರಳೀದರರಾವ್ ಕುಲಕರ್ಣಿ, ತಾ.ಪಂ ಇಒ ನೀಲಗಂಗಾ ಬಬಲಾದಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೆಟ್ಟದೇಶ ಮಾಳೆಕೊಪ್ಪ, ತಾಲೂಕು ವೈದ್ಯಾಧಿಕಾರಿ ಡಾ. ನೇತ್ರಾವತಿ ಹಿರೇಮಠ, ಶಿವಲೀಲಾ ವನ್ನೂರು, ರವಿಕುಮಾರ ಪವಾರ ಇತರರಿದ್ದರು.