ಲವ್ ಜಿಹಾದ್ ಹೆಸರಿನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಗುರುವಾರ ಕೊಪ್ಪಳದಲ್ಲಿ ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿಗೆ ಮನವಿ ಸಲ್ಲಿಸಿದರು. ವಿಪ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ, ಸುನಿಲ್ ಹೆಸರೂರು, ಕೀರ್ತಿ ಪಾಟೀಲ್ ಇತರರಿದ್ದರು.
ಕೊಪ್ಪಳ: ಲವ್ ಜಿಹಾದ್ ಹೆಸರಿನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವಂತೆ ಒತ್ತಾಯಿಸಿ ವಿಪ ಸದಸ್ಯೆ ಹೇಮಲತಾ ನಾಯಕ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಗುರುವಾರ ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿಗೆ ಮನವಿ ಸಲ್ಲಿಸಿದರು.
ಮುಸ್ತಾಫಾ ಎಂಬಾತನ ಮೊಬೈಲ್ನಲ್ಲಿ ಯುವತಿಯರ ಸಾಕಷ್ಟು ಫೋಟೋ, ವಿಡಿಯೋ ದೊರೆತಿರುವುದು ಆತಂಕಕಾರಿ. ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮಟ್ಕಾ ಸೇರಿ ಇತರ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆ. ದೇಶದ ವಿವಿಧೆಡೆ ಇಂಥ ಟನೆಗಳು ಆಗಾಗ ಮರುಕಳಿಸುತ್ತಿವೆ. ಆದರೂ ಕಡಿವಾಣ ಬೀಳುತ್ತಿಲ್ಲ. ಇತ್ತೀಚೆಗೆ ಗವಿ ನಾಯಕ ಎಂಬ ಯುವಕನನ್ನು ಪ್ರೀತಿ ವಿಷಯವಾಗಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಇವೆಲ್ಲ ಟನೆಗಳು ಮಹಿಳೆಯರಲ್ಲಿ ಸುರತ ಎಂಬ ಭಾವನೆ ಮೂಡಿಸುತ್ತಿಲ್ಲವೆಂದು ಆರೋಪಿಸಿದರು.
ಪ್ರಕರಣದ ಆರೋಪಿ ವಿಚಾರಣೆ ಮಾಡುವುದು ಬಿಟ್ಟು, ಸಂಬಂಧಿಸದ ಹುಡುಗರ ವಿಚಾರಣೆ ನಡೆದಿದೆ. ಲವ್ ಜಿಹಾದ್ ವ್ಯವಸ್ಥಿತ ಜಾಲ. ಹಿಂದೂ ಯುವಕ, ಯುವತಿಯರನ್ನು ಗುರಿಯಾಗಿಸಿ ಮತಾಂತರ ಉದ್ದೇಶದಿಂದ ಮಾಡಲಾಗುತ್ತಿದೆ. ವೈಜ್ಞಾನಿಕ ತನಿಖೆ ನಡೆಸಬೇಕು. ನೊಂದ ಯುವತಿಯರಿಗೆ ನ್ಯಾಯ ಕೊಡಿಸಬೇಕು. ಅವರ ಗುರುತು ಗೌಪ್ಯವಾಗಿಡಬೇಕು. ಪ್ರಭಾವಿಗಳಿದ್ದರೂ ಮಣಿಯದೆ ತನಿಖೆ ನಡೆಸಿ. ಪ್ರಕರಣದಲ್ಲಿ ಸಾರ್ವಜನಿಕರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕೆಂದು ಒತ್ತಾಯಿಸಿದರು.
ವಿಪ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ, ಸುನಿಲ್ ಹೆಸರೂರು, ಕೀರ್ತಿ ಪಾಟೀಲ್ ಇತರರಿದ್ದರು.