ಆರ್‌ಟಿಐ ಯೋಜನೆ ಜಾರಿಯಲ್ಲಿದ್ದರೂ, ಹೆಚ್ಚಿನ ಶುಲ್ಕ ಪಡೆಯುವುದು ನಿಂತಿಲ್ಲ. ಟ್ಯೂಶನ್, ಟ್ಯುಟೋರಿಯಲ್, ಸಿಬಿಎಸ್‌ಇ, ಐಸಿಎಸ್‌ಸಿ ಪಠ್ಯಕ್ರಮ, ಜೆಇಇ, ನೀಟ್ ಸಿಇಟಿ ಹೆಸರಿನಲ್ಲಿ ಪಾಲಕರನ್ನು ಶೋಷಿಸಲಾಗುತ್ತಿದೆ. ವಿದ್ಯಾರ್ಥಿಗಳ ಶುಲ್ಕ ಮತ್ತು ಸೌಲಭ್ಯಗಳ ಬಗ್ಗೆ ಬಹಿರಂಗ ಮಾಹಿತಿ ಲಕ ಹಾಕಬೇಕೆಂಬ ನಿಯಮವಿದ್ದರೂ, ಯಾವೊಂದು ಶಾಲೆ, ಕಾಲೇಜು ಪಾಲಿಸುತ್ತಿಲ್ಲ. ಶಿಕ್ಷಣ ಹಕ್ಕುಗಳನ್ನು ನೀಡದಿದ್ದರೆ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.