ದಲಿತರ ದೌರ್ಜನ್ಯ ತಡೆಯಿರಿ

ದಲಿತರ ದೌರ್ಜನ್ಯ ತಡೆಗೆ ಒತ್ತಾಯಿಸಿ ದಲಿತ ಮುಖಂಡರು ಸೋಮವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ಪ್ರಮುಖರಾದ ಕರಿಯಪ್ಪ ಗುಡಿಮನಿ, ರಾಮಪ್ಪ ಎಂ. ಗುಡ್ಲಾನೂರು, ಮುದುಕಪ್ಪ ಎಂ. ಹೊಸಮನಿ, ಹುಲಗಪ್ಪ ಹ್ಯಾಟಿ, ಹಂಚಾಳಪ್ಪ ಇಟಗಿ, ಗವಿಸಿದ್ದಪ್ಪ ಹಲಿಗಿ ಇದ್ದರು.
ದಲಿತರ ದೌರ್ಜನ್ಯ ತಡೆಗೆ ಒತ್ತಾಯಿಸಿ ದಲಿತ ಮುಖಂಡರು ಸೋಮವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ಪ್ರಮುಖರಾದ ಕರಿಯಪ್ಪ ಗುಡಿಮನಿ, ರಾಮಪ್ಪ ಎಂ. ಗುಡ್ಲಾನೂರು, ಮುದುಕಪ್ಪ ಎಂ. ಹೊಸಮನಿ, ಹುಲಗಪ್ಪ ಹ್ಯಾಟಿ, ಹಂಚಾಳಪ್ಪ ಇಟಗಿ, ಗವಿಸಿದ್ದಪ್ಪ ಹಲಿಗಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿವಿಧ ಸಂಟನೆಗಳಿಂದ ಪ್ರತಿಭಟನೆ
ಕೊಪ್ಪಳ : ಜಿಲ್ಲೆಯಲ್ಲಿ ದಲಿತರ ಮೇಲೆ ನಡೆಯುತ್ತಿರುವ ಸರಣಿ ದೌರ್ಜನ್ಯಗಳನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಮಾದಿಗ ರಕ್ಷಣೆ ವೇದಿಕೆ ಮತ್ತು ವಿವಿಧ ಪ್ರಗತಿಪರ ಸಂಘಟನೆಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದವು.
ತಾವರಗೇರಾದಲ್ಲಿ ಉಪನ್ಯಾಸಕಿಯೊಬ್ಬರ ಮೇಲೆ ಪ್ರಾಣ ಬೆದರಿಕೆ ಹಾಕಲಾಗಿದೆ. ಅಟ್ರಾಸಿಟಿ ಕೇಸ್​ ವಾಪಸ್​ ಪಡೆಯಲು ಬೆದಿಕೆ ಹಾಕಿದ್ದಾರೆ. ಯಲುರ್ಬಗಾ ತಾಲೂಕಿನ ಕೋನಸಾಗರದಲ್ಲಿ ದಲಿತರ ಮನೆ ಸುಟ್ಟವರನ್ನು ಈವರೆಗೂ ಬಂಧಿಸಿಲ್ಲ. ದಲಿತ ಮೌನೇಶ ಮತ್ತವರ ಸಹೋದರರ ಮೇಲೆ ಕಾರಣವಿಲ್ಲದೆ ರೌಡಿ ಶೀಟರ್​ ತೆರೆದು ಪೊಲೀಸರು ದೌರ್ಜನ್ಯ ಎಸಗುತ್ತಿದ್ದಾರೆ. ಬಿ.ಹೊಸಳ್ಳಿ ಗ್ರಾಮದ ದಲಿತ ಯುವತಿ ಅಕ್ಷತಾ ಕಾಣೆಯಾಗಿದ್ದು ಪತ್ತೆ ಮಾಡಿಲ್ಲವೆಂದು ಆರೋಪಿಸಿದರು.
ದಲಿತರ ಮೇಲಿನ ದೌರ್ಜನ್ಯ ತಡೆಯಬೇಕು. ಉಪನ್ಯಾಸಕಿಗೆ ಬೆದರಿಕೆ ಒಡ್ಡಿದವರನ್ನು ಬಂಧಿಸಿಬೇಕು. ಮನೆಸುಟ್ಟ ಆರೋಪಿಗಳನ್ನು ಅರೆಸ್ಟ್​ ಮಾಡಿ. ದಲಿತರಿಗೆ ಕಿರುಕುಳ ನೀಡುವ ಪೊಲೀಸರ ವಿರುದ್ಧ ಕಾನೂನು ಕ್ರಮ ಜರುಗಿಸಿ. ಕಾಣೆಯಾದ ಯುವತಿಯನ್ನು ಪತ್ತೆ ಮಾಡಬೇಕು. ಜಿಲ್ಲೆಯಲ್ಲಿ ಅಸ್ಪ-----ೃಶ್ಯತೆ ಆಚರಣೆ ಸಂಪೂರ್ಣ ತೊಡೆದು ಹಾಕಿ. ೌರದ ಅಂಗಡಿ, ಹೋಟೆಲ್​ಗಳಲ್ಲಿ ದಲಿತರಿಗೆ ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಎಂದು ಆಗ್ರಹಿಸಿದರು.
ಪ್ರತಿಭಟನೆ ಬಳಿಕ ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿಗೆ ಮನವಿ ಸಲ್ಲಿಸಿದರು. ಪ್ರಮುಖರಾದ ಕರಿಯಪ್ಪ ಗುಡಿಮನಿ, ರಾಮಪ್ಪ ಎಂ. ಗುಡ್ಲಾನೂರು, ಮುದುಕಪ್ಪ ಎಂ. ಹೊಸಮನಿ, ಹುಲಗಪ್ಪ ಹ್ಯಾಟಿ, ಹಂಚಾಳಪ್ಪ ಇಟಗಿ, ಗವಿಸಿದ್ದಪ್ಪ ಹಲಿಗಿ, ಮುತ್ತುರಾಜ, ಹನುಮಪ್ಪ ಬಿ. ಹೊಸಳ್ಳಿ, ಯಮನೂರಪ್ಪ ಮುದ್ದಾಬಳ್ಳಿ, ಕೆ. ಮುರುಗೇಶ ಬರಗೂರ, ಶೋಭಾ ಪೂಜಾರ, ಚನ್ನಮ್ಮ ಜಲಗಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net