ಕಳವಾಗಿದ್ದ ಬೊಲೆರೊ ವಾಹನ ಪತ್ತೆ

ಕಳವಾದ ವಾಹನ ಹಿಡಿಯಲು ಮುಂದಾಗಿದ್ದಾಗ ಜಖಂಗೊಂಡ ಕನಕಗಿರಿ ಠಾಣೆಯ 112 ವಾಹನ./ ಕಾರಟಗಿ ಠಾಣೆಯಲ್ಲಿರುವ ಬೊಲೆರೊ ಪಿಕ್‌ಅಪ್ ವಾಹನ.
ಕಳವಾದ ವಾಹನ ಹಿಡಿಯಲು ಮುಂದಾಗಿದ್ದಾಗ ಜಖಂಗೊಂಡ ಕನಕಗಿರಿ ಠಾಣೆಯ 112 ವಾಹನ./ ಕಾರಟಗಿ ಠಾಣೆಯಲ್ಲಿರುವ ಬೊಲೆರೊ ಪಿಕ್‌ಅಪ್ ವಾಹನ.
Published on

ಪ್ರಮುಖ ಮುಖ್ಯಾಂಶಗಳು

  • ಮೈಸೂರು ಜಿಲ್ಲೆಯಲ್ಲಿ ಕಳವಾಗಿದ್ದ ಗೂಡ್ಸ್
  • ಕನಕಗಿರಿ 112 ಪೊಲೀಸರ ಕಾರ್ಯಕ್ಷಮತೆ
ಕನಕಗಿರಿ: ಎಂಟು ತಿಂಗಳ ಹಿಂದೆ ಮೈಸೂರು ಜಿಲ್ಲೆಯಲ್ಲಿ ಕಳವಾಗಿದ್ದ ಗೂಡ್ಸ್ ವಾಹನವು ಜಿಪಿಎಸ್ ತಂತ್ರಜ್ಞಾನ ಸಹಾಯದಿಂದ ಹಾಗೂ ಸ್ಥಳೀಯ ಠಾಣೆ 112 ಪೊಲೀಸರ ಕಾರ್ಯಕ್ಷಮತೆಯಿಂದ ಮೂರು ದಿನಗಳ ಹಿಂದೆ ಪತ್ತೆಯಾಗಿದೆ.
"

ಈ ವಾಹನಕ್ಕೆ ಜಿಪಿಎಸ್ ಇರುವುದು ನಮಗೆ ಮೊದಲು ತಿಳಿದಿರಲಿಲ್ಲ. ವಾಹನ ಕಳುವಾದ ನಂತರ ಗೊತ್ತಾಗಿದ್ದು, ಜಿಪಿಎಸ್ ಟ್ರಾಕ್ ಮೂಲಕ ವಾಹನ ಇಲ್ಲಿರುವುದು ತಿಳಿದು ಬಂದಿದ್ದು, ಪೊಲೀಸರಿಗೆ ಮಾಹಿತಿ ತಿಳಿಸಿದೆವು. ಪೊಲೀಸರು ವಾಹನವನ್ನು ಪತ್ತೆ ಹಚ್ಚಿದ್ದಾರೆ.

ಕೂಡಲೇ ಎಚ್ಚೆತ್ತ ಅವರು 112ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ತಾವರಗೇರಾ ಮಾರ್ಗವಾಗಿ ಹೋಗುತ್ತಿದ್ದಾಗ ಹುಲಿಹೈದರ್ ಬ್ರಿಡ್ಜ್ ಬಳಿ ವಾಹನ ಕಂಡಿದೆ. ಪೊಲೀಸರು ವಾಹನ ವಶಕ್ಕೆ ಮುಂದಾದಾಗ ಕಳ್ಳರು ತಾವು ತಪ್ಪಿಸಿಕೊಳ್ಳಲು 112 ವಾಹನಕ್ಕೆ ಗುದ್ದಿ ವಾಹನ ಸಮೇತ ಪರಾರಿಯಾಗಿದ್ದಾರೆ. ಗಸ್ತು ವಾಹನದಲ್ಲಿದ್ದ ಪೊಲೀಸರಿಗೆ ಯಾವುದೇ ಅಪಾಯವಾಗಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net