ಅರ್ಹರೆಲ್ಲರಿಗೂ ಮತದಾನ ಹಕ್ಕು ಕಲ್ಪಿಸಲು ಕ್ರಮ

ಯಲಬುರ್ಗಾದಲ್ಲಿ ಆಯೋಜಿಸಿದ್ದ ಬೂತ್ ಮಟ್ಟದ ಏಜೆಂಟರ ತರಬೇತಿ ಕಾರ್ಯಾಗಾರದಲ್ಲಿ ಡಿಸಿ ಡಾ.ಸುರೇಶ ಬಿ.ಹಿಟ್ನಾಳ ಮಾತನಾಡಿದರು. ಮತದಾರರ ನೋಂದಣಾಧಿಕಾರಿ ವಿಶ್ವನಾಥಗೌಡ, ತಹಸೀಲ್ದಾರರಾದ ಪ್ರಕಾಶ ನಾಶಿ, ಬಸವರಾಜ ಬೆಣ್ಣೆಶಿರೂರ, ತಾಪಂ ಇಒ ನೀಲಗಂಗಾ ಬಬಲಾದ ಇತರರಿದ್ದರು.
ಯಲಬುರ್ಗಾದಲ್ಲಿ ಆಯೋಜಿಸಿದ್ದ ಬೂತ್ ಮಟ್ಟದ ಏಜೆಂಟರ ತರಬೇತಿ ಕಾರ್ಯಾಗಾರದಲ್ಲಿ ಡಿಸಿ ಡಾ.ಸುರೇಶ ಬಿ.ಹಿಟ್ನಾಳ ಮಾತನಾಡಿದರು. ಮತದಾರರ ನೋಂದಣಾಧಿಕಾರಿ ವಿಶ್ವನಾಥಗೌಡ, ತಹಸೀಲ್ದಾರರಾದ ಪ್ರಕಾಶ ನಾಶಿ, ಬಸವರಾಜ ಬೆಣ್ಣೆಶಿರೂರ, ತಾಪಂ ಇಒ ನೀಲಗಂಗಾ ಬಬಲಾದ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಹಿಟ್ನಾಳ ಹೇಳಿಕೆ
  • ಬಿಎಲ್‌ಎಗಳಿಗೆ ತರಬೇತಿ ಕಾರ್ಯಾಗಾರ
ಯಲಬುರ್ಗಾ: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಯಾವುದೇ ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಪ್ರಶ್ನೆಯೇ ಇಲ್ಲ. ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಮತದಾನದ ಹಕ್ಕು ದೊರೆಯುವಂತೆ ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಹಿಟ್ನಾಳ ಹೇಳಿದರು.
ಪಟ್ಟಣದ ಬುದ್ಧ ಬಸವ ಅಂಬೇಡ್ಕರ್ ಭವನದಲ್ಲಿ ಚುನಾವಣಾ ಆಯೋಗದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಬೂತ್ ಮಟ್ಟದ ಏಜೆಂಟರ (ಬಿಎಲ್‌ಎ) ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಮತದಾರರ ಪಟ್ಟಿಯಲ್ಲಿ ಒಂದಕ್ಕಿಂತ ಹೆಚ್ಚು ಕಡೆ ಹೆಸರು ಹೊಂದಿರುವವರು ಒಂದೇ ಸ್ಥಳದಲ್ಲಿ ಮತದಾನ ಮಾಡಬೇಕಿದ್ದು, ನಕಲಿ ಮತದಾರರಿಗೆ ಅವಕಾಶ ಇಲ್ಲ. ಸ್ಥಳಾಂತರ ಆದವರು ಹಾಗೂ ಮರಣಹೊಂದಿದವರ ಮಾಹಿತಿ ಆಧರಿಸಿ ಮತದಾರರ ಪಟ್ಟಿ ಪರಿಷ್ಕರಿಸಲಾಗುತ್ತಿದೆ. ಬಿಎಲ್‌ಒ ಹಾಗೂ ವಿವಿಧ ಪಕ್ಷಗಳ ಬಿಎಲ್‌ಎಗಳು ಸಮನ್ವಯ ಸಾಧಿಸಿ ಅಗತ್ಯ ಮಾಹಿತಿ ಒದಗಿಸಬೇಕು.
ಅರ್ಹ ಮತದಾರರು ಮತದಾನ ಹಕ್ಕಿನಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಎಸ್‌ಐಆರ್ ಪ್ರಕ್ರಿಯೆಯ ಉದ್ದೇಶ. ಆದ್ದರಿಂದ ಸಮಗ್ರ ಪರಿಷ್ಕರಣೆ ಕೈಗೊಳ್ಳಲಾಗಿದೆ. ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ 2,32,550 ಮತದಾರರಲ್ಲಿ 2,26,066 ಜನರ ಮ್ಯಾಪಿಂಗ್ ಪೂರ್ಣಗೊಂಡಿದ್ದು, 6,484 ಮತದಾರರ ಮ್ಯಾಪಿಂಗ್ ಬಾಕಿ ಇದ್ದು, ಶೇ.96.43 ಪ್ರಗತಿ ಸಾಧಿಸಿದೆ ಎಂದರು.
ಸಹಾಯಕ ಆಯುಕ್ತ ಕ್ಯಾಕ್ಟನ್ ಮಹೇಶ ಮಾಲಗಿತ್ತಿ, ಮತದಾರರ ನೋಂದಣಾಧಿಕಾರಿ ವಿಶ್ವನಾಥಗೌಡ, ತಹಸೀಲ್ದಾರರಾದ ಪ್ರಕಾಶ ನಾಶಿ, ಬಸವರಾಜ ಬೆಣ್ಣೆಶಿರೂರ, ಉಪ ತಹಸೀಲ್ದಾರ್ ವಿಜಯಕುಮಾರ ಗುಂಡೂರ, ತಾಪಂ ಇಒಗಳಾದ ನೀಲಗಂಗಾ ಬಬಲಾದ, ಸಂತೋಷ ಪಾಟೀಲ್ ಬಿರಾದಾರ, ಪಿಡಬ್ಲ್ಯುಡಿ ಎಇಇ ಮಲ್ಲಿಕಾರ್ಜುನ, ಪಪಂ ಮುಖ್ಯಾಧಿಕಾರಿ ನಾಗೇಶ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net