ಪ್ರವಾಸೋದ್ಯಮ ಉತ್ತೇಜನಕ್ಕೆ ಕ್ರಮ

ಕನಕಗಿರಿ ಅಂಬೇಡ್ಕರ್ ಭವನಕ್ಕೆ ಸಚಿವ ಶಿವರಾಜ ತಂಗಡಗಿ ಭೂಮಿ ಪೂಜೆ ನೆರವೇರಿಸಿದರು. ಪಪಂ ಅಧ್ಯಕ್ಷೆ ತನುಶ್ರೀ, ಜಿಪಂ ಮಾಜಿ ಸದಸ್ಯ ವೀರೇಶಪ್ಪ ಸಮಗಂಡಿ, ತಹಸೀಲ್ದಾರ್ ವಿಶ್ವನಾಥ ಮುರಡಿ, ಇಒ ಕೆ,ರಾಜಶೇಖರ್, ಸಿಡಿಪಿಒ ವಿರೂಪಾಕ್ಷಿ, ಬ್ಲಾಕ್ ಅಧ್ಯಕ್ಷ ಕೆ.ಗಂಗಾಧರಸ್ವಾಮಿ, ಪಪಂ ಅಧ್ಯಕ್ಷೆ ತನುಶ್ರೀ ಟಿಜೆ ರಾಮಚಂದ್ರ, ಉಪಾಧ್ಯಕ್ಷ ಕಂಠಿ ರಂಗಪ್ಪ ನಾಯಕ, ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ನೋಂದಣಿ
  • ಕಚೇರಿ
  • ಉದ್ಘಾಟನೆ
ಕನಕಗಿರಿ: ಕುಕನೂರು, ಕಾರಟಗಿ ಹಾಗೂ ಕನಕಗಿರಿ ತಾಲೂಕಿನಲ್ಲಿ ವಿವಿಧ ಕಚೇರಿ ಆರಂಭಕ್ಕೆ ಕ್ರಮವಹಿಸಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ತಾಲೂಕಿನ ನಾನಾ ಗ್ರಾಮಗಳಲ್ಲಿ ಸೋಮವಾರ ರಸ್ತೆ ಕಾಮಗಾರಿ, ಅಂಬೇಡ್ಕರ್ ಭವನ ಭೂಮಿ ಪೂಜೆ, ಉಪನೋಂದಣಿ ಹಾಗೂ ವಿವಾಹ ನೋಂದಣಾಧಿಕಾರಿಗಳ ಕಚೇರಿಗೆ ಚಾಲನೆ ನೀಡಿ ಮಾತನಾಡಿದರು.
ಕನಕಗಿರಿಯಲ್ಲಿ ಈ ಮೊದಲು ತಹಸಿಲ್ ಕಚೇರಿ, ಸಿಡಿಪಿಒ ಕಚೇರಿ ಆರಂಭಿಸಲಾಗಿದೆ. ಈಗ ನೋಂದಣಿ ಕಚೇರಿ ಆರಂಭಿಸಲಾಗುತ್ತಿದೆ. ಕ್ಷೇತ್ರ ಶಿಕ್ಷಣಾಧಿಕಾರಿ, ಲೋಕೋಪಯೋಗಿ, ಅಗ್ನಿ ಶಾಮಕ ಠಾಣೆ ಸೇರಿದಂತೆ ತಾಲೂಕಿಗೆ ಬೇಕಾದ ಎಲ್ಲ ಕಚೇರಿಗಳನ್ನು ನನ್ನ ಅವಧಿಯೊಳಗೆ ನಿರ್ಮಿಸಲು ಶಕ್ತಿ ಮೀರಿ ಪ್ರಯತ್ನಿಸಲಾಗುವುದು. ಅಗ್ನಿ ಶಾಮಕದಳ ಕಚೇರಿಗೆ 3 ಕೋಟಿ ರೂ. ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆದಿದೆ. ಹೊಸ ಪಟ್ಟಣ ಪಂಚಾಯಿತಿಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
100 ಹಾಸಿಗೆ ಆಸ್ಪತ್ರೆಗೆ ಟೆಂಡರ್ ಆಗಿದೆ. ತೋಟಗಾರಿಕೆ ಪಾರ್ಕ್‌ಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಅಭಿವೃದ್ಧಿಗೆ 8 ಕೋಟಿ 50ಲಕ್ಷ ರೂ.ಅನುಮತಿ ಸಕ್ಕಿದ್ದು, ಈಗ 9ಕೋಟಿ, 99ಲಕ್ಷ ರೂ.ಗೆ ಹೆಚ್ಚುವರಿ ಬಿಡುಗಡೆ ಮಾಡಬೇಕೆಂದು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ವೆಂಕಟಪತಿ ಭಾವಿ ಅಭಿವೃದ್ಧಿಗೆ 1 ಕೋಟಿ ರೂ.ಬಿಡುಗಡೆಯಾಗಿದ್ದು, ಕನಕಗಿರಿ ಪ್ರವಾಸೋದ್ಯಮ ಸ್ಥಳ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಳ್ಳತನ ಪ್ರಕರಣ ತಡೆಯಲು ಗ್ರಾಮೀಣ ಭಾಗದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಕಳ್ಳತನ ತಡೆಯಲಾಗುವುದು ಎಂದರು.
ಜಿಲ್ಲಾ ಉಪನೋಂದಣಾಧಿಕಾರಿ ಸುಬಾಸ, ತಾಲೂಕು ಉಪನೋಂದಣಾಧಿಕಾರಿ ಸಂತೋಷ, ಜಿ.ಪಂ.ಮಾಜಿ ಸದಸ್ಯ ವೀರೇಶಪ್ಪ ಸಮಗಂಡಿ, ಪ.ಪಂ.ಸದಸ್ಯರಾದ ಸಂಗಪ್ಪ ಸಜ್ಜನ, ರಾಖೇಶ ಕಂಪ್ಲಿ, ರಾಜಾಸಾಬ್ ನಂದಾಪುರ, ಪ್ರಮುಖರಾದ ಸಿದ್ಧಪ್ಪ ನಿರಲೂಟಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net