ಅಕ್ಟೋಬರ್ ವೇಳೆಗೆ ಕೆರೆ ತುಂಬಿಸಲು ಕ್ರಮ

ದೊಡ್ಡನಗೌಡ ಪಾಟೀಲ್
ದೊಡ್ಡನಗೌಡ ಪಾಟೀಲ್
Published on

ಕುಷ್ಟಗಿ: ಹನುಮನಾಳ ಹೋಬಳಿ ವ್ಯಾಪ್ತಿಯ ಕೆರೆಗಳ ಭರ್ತಿಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು. 

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆರೆ ತುಂಬಿಸಲು ಆಗ್ರಹಿಸಿ ಬಾದಿಮನಾಳ ಕ್ರಾಸ್‌ನಲ್ಲಿ ನೂರಾರು ಸಂಖ್ಯೆಯ ರೈತರು ಧರಣಿ ನಡೆಸುತ್ತಿರುವುದು ಗಮನಕ್ಕಿದೆ. ಬಾದಿಮನಾಳ, ಜಹಾಗೀರಗುಡದೂರು ಮತ್ತು ಮಾವಿನ ಇಟಗಿ ಕೆರೆಗಳನ್ನು ತುಂಬಿಸುವುದು ರೈತರ ಬೇಡಿಕೆಯಾಗಿದೆ. ನನಗೂ ಕಾಳಜಿ ಇದೆ. 

ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಚರ್ಚಿಸಿದ್ದು, ವಿಧಾನಮಂಡಲದ ಅಧಿವೇಶನದಲ್ಲಿಯೂ ಪ್ರಸ್ತಾಪಿಸಿದ್ದೇನೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್ ಮೊದಲ ವಾರದೊಳಗೆ ಕೆರೆಗಳಿಗೆ ನೀರು ತುಂಬಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ರೈತರು ಯಾವುದೇ ಕಾರಣಕ್ಕೂ ಉದ್ವೇಗಕ್ಕೆ ಒಳಗಾಗದೆ, ಅಧಿಕಾರಿಗಳೊಂದಿಗೆ ಶಾಂತಿಯುತವಾಗಿ ಚರ್ಚಿಸಿ ಸಹಕರಿಸಬೇಕು ಎಂದು ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net