ರಾಜ್ಯ ವಕೀಲರ ಪರಿಷತ್​ ಚುನಾವಣೆ

ಕೊಪ್ಪಳ ಜಿಲ್ಲಾ ವಕೀಲರ ಸಭಾಭವನದಲ್ಲಿ ಇತ್ತೀಚೆಗೆ ನಡೆದ ವಕೀಲರ ಸಭೆಯಲ್ಲಿ ನ್ಯಾಯವಾದಿ ಶೇಕ್​ ಇಸ್ಮಾಯಿಲ್​ ಜಬಿವುಲ್ಲಾ ತಮಗೆ ಬೆಂಬಲ ನೀಡುವಂತೆ ಮನವಿ ಮಾಡಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ, ಉಪಾಧ್ಯಕ್ಷ ಬಿ.ವಿ. ಸಜ್ಜನ್​, ಕಾರ್ಯದರ್ಶಿ ಪ್ರಕಾಶ್​ ಹಾದಿಮನಿ, ಮಾಜಿ ಅಧ್ಯಕ್ಷ ಹನುಮೇಶ್​ ಮುರಡಿ, ನಗರಸಭೆ ಮಾಜಿ ಅಧ್ಯಕ್ಷ ಅಮ್ಜದ್​ ಪಟೇಲ್​ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಶೇಕ್​ ಇಸ್ಮಾಯಿಲ್​ ಭರ್ಜರಿ ಪ್ರಚಾರ
ಕೊಪ್ಪಳ : ರಾಜ್ಯ ವಕೀಲರ ಪರಿಷತ್ತಿನ 2026ರ ಚುನಾವಣೆಯ ಕಣ ರಂಗೇರಿದ್ದು, ಸದಸ್ಯ ಸ್ಥಾನದ ಅಭ್ಯರ್ಥಿ ನ್ಯಾಯವಾದಿ ಶೇಕ್​ ಇಸ್ಮಾಯಿಲ್​ ಜಬಿವುಲ್ಲಾ ಅವರು ಜಿಲ್ಲೆಯಲ್ಲಿ ಬಿರುಸಿನ ಮತಯಾಚನೆ ನಡೆಸಿದರು.
ಇತ್ತೀಚೆಗೆ ನಗರದ ಜಿಲ್ಲಾ ವಕೀಲರ ಸಭಾಭವನದಲ್ಲಿ ವಕೀಲರ ಸಭೆಯಲ್ಲಿ ಮಾತನಾಡಿ, ತಮಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.
ವಕೀಲರ ಪರಿಫಿತ್ತಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದು. ನ್ಯಾಯವಾದಿಗಳ ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವುದು. ಕಕ್ಷಿದಾರರಿಗೆ ಹಾಗೂ ಸಾರ್ವಜನಿಕರಿಗೆ ಉತ್ತಮ ರೀತಿಯಲ್ಲಿ ನ್ಯಾಯ ದೊರಕಿಸಿಕೊಡಲು ಪೂರಕ ವಾತಾವರಣ ನಿರ್ಮಿಸುವುದು. ವಕೀಲರ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗಾಗಿ ಪ್ರಾಮಾಣಿಕವಾಗಿ ಹೋರಾಡುವುದಾಗಿ ಭರವಸೆ ನೀಡಿದರು.
"

ಮಾರ್ಚ್​ 11 ರಂದು ನಡೆಯಲಿರುವ ಚುನಾವಣೆಯಲ್ಲಿ ನನಗೆ ಹೆಚ್ಚಿನ ಮತಗಳನ್ನು ನೀಡಿ ಆಶೀರ್ವದಿಸಬೇಕು. ನಮ್ಮ ವೃತ್ತಿ ಬಾಂಧವರ ಏಳಿಗೆಗಾಗಿ ಶ್ರಮಿಸಲು ಒಂದು ಅವಕಾಶ ನೀಡಿ ಎಂದರು

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ, ಉಪಾಧ್ಯಕ್ಷ ಬಿ.ವಿ. ಸಜ್ಜನ್​, ಕಾರ್ಯದರ್ಶಿ ಪ್ರಕಾಶ್​ ಹಾದಿಮನಿ, ಮಾಜಿ ಅಧ್ಯಕ್ಷ
ಹನುಮೇಶ್​ ಮುರಡಿ, ನಗರಸಭೆ ಮಾಜಿ ಅಧ್ಯಕ್ಷ ಅಮ್ಜದ್​ ಪಟೇಲ್​, ರಿಯಾಜ್​ ಅಹಮದ್​, ನ್ಯಾಯವಾದಿಗಳಾದ ಆಸಿಫ್​ ಸರ್ದಾರ್​, ಬೆಳ್ಳಪ್ಪ, ಹನುಮಂತ್​ ರಾವ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net