ಇಲಾಖೆ ಈಗಾಗಲೇ ನಾಲ್ಕು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಪ್ರಕಟಿಸಿದೆ. ಮುಂದುವರೆದು 8,450 ಪ್ರಶ್ನೆಗಳನ್ನು ರಚಿಸಿದೆ. ಇವುಗಳನ್ನೇ ವಾರ್ಷಿಕ ಪರೀೆಯಲ್ಲಿ ಕೇಳುವುದಾಗಿ ಹೇಳಿದೆ. ಇದು ಮಕ್ಕಳಿಗೆ ವರವಾಗಿದ್ದು, ಎಲ್ಲವನ್ನು ಗಮನವಿಟ್ಟು ಮನನ ಮಾಡಿದಲ್ಲಿ ಉತ್ತಮ ಲಿತಾಂಶ ಪಡೆಯುವುದು ಕಷ್ಟವೇನಲ್ಲ. ಈ ನಿಟ್ಟಿನಲ್ಲಿ ಮಕ್ಕಳನ್ನು ಇಲಾಖೆ ಸಿದ್ಧಪಡಿಸಿದಲ್ಲಿ ಜಿಲ್ಲೆಯೂ ರಾಜ್ಯಮಟ್ಟದಲ್ಲಿ ಉತ್ತಮ ರ್ಯಾಂಕ್ ಪಡೆಯಲು ನೆರವಾಗಲಿದೆ.