ಕೊಪ್ಪಳದಲ್ಲಿ ಸೋಮವಾರ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿ ಜಿಪಂ ತೆಮಾಸಿಕ ಕೆಡಿಪಿ ಸಭೆ ನಡೆಯಿತು. ಶಾಸಕ ರಾದ ದೊಡ್ಡನಗೌಡ, ರಾವೇಂದ್ರ ಹಿಟ್ನಾಳ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ.ಮೋಹನ್ರಾಜ್, ಡಿಸಿ.ಡಾ.ಸುರೇಶ ಬಿ.ಇಟ್ನಾಳ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಅಧಿಕಾರಿಗಳಿಗೆ ಸಚಿವ ತಂಗಡಗಿ ಎಚ್ಚರಿಕೆ
ಜಿಪಂ ತೆಮಾಸಿಕ ಕೆಡಿಪಿ ಸಭೆ
ಕೊಪ್ಪಳ : ಕಳೆದ ವರ್ಷ ಎಸ್ಸೆಸ್ಸೆಲ್ಸಿ ಲಿತಾಂಶ ತೀವ್ರ ಕುಸಿದಿದೆ. ಈ ವರ್ಷ ಸುಧಾರಣೆ ಆಗಲೇಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಶಿಕ್ಷಣಾಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಪಂ ತೆಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕಳೆದ ವರ್ಷ 30ನೇ ಸ್ಥಾನ ಬಂದಿದ್ದು ನಮಗೆ ನಾಚಿಕೆ ಆಗುತ್ತಿದೆ. ಈ ವರ್ಷ ಸುಧಾರಿಸಲೇಬೇಕು. ಏನೆಲ್ಲ ಸುಧಾರಣೆ ಕ್ರಮ ಕೈಗೊಂಡಿದ್ದೀರಿ ? ಪ್ರೌಢ ಶಾಲಾ ಮುಖ್ಯ ಶಿಕ್ಷಕರೊಂದಿಗೆ ಫೆ.17 ಸಂಜೆ 5 ಗಂಟೆಗೆ ಸಭೆ ಆಯೋಜಿಸಿ. ನಾನೇ ಅಧ್ಯಕ್ಷತೆವಹಿಸಿ ಪ್ರಗತಿ ಪರಿಶೀಲಿಸುವೆ ಎಂದು ತಾಕೀತು ಮಾಡಿದರು. ಜಿಪಂ ಸಿಇಒ ವರ್ಣಿತ್ ನೇಗಿ, 40ಪ್ಲಸ್ ಕಾರ್ಯಕ್ರಮ ರೂಪಿಸಿ ಅನುಷ್ಠಾನ ಮಾಡುತ್ತಿರುವುದಾಗಿ ತಿಳಿಸಿದರು. ಡಿಸಿ ಡಾ.ಸುರೇಶ ಬಿ.ಇಟ್ನಾಳ, ಎರಡು ಪೂರ್ವಭಾವಿ ಪರೀೆ ಲಿತಾಂಶ ಹೇಳಿಕೊಳ್ಳುವಂತಿಲ್ಲವೆಂದು ಬೇಸರ ಹೊರಹಾಕಿದರು. ಡಿಡಿಪಿಐ ಸೋಮಶೇಖರಗೌಡ ಪಾಟೀಲ್, 8ನೇ ತರಗತಿಯಿಂದ ಮಕ್ಕಳನ್ನು ಸುಧಾರಿಸುವ ಯೋಜನೆ ಜಾರಿಗೊಳಿಸಬೇಕಿದೆ ಎಂದರು.
ಡಿಎಚ್ಒ ಡಾ.ಟಿ.ಲಿಂಗರಾಜು ಮಾತನಾಡಿ, ಹೊಸ ಆಸ್ಪತ್ರೆ ಮಂಜೂರು, ಹಾಸಿಗೆ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾಗಿ ತಿಳಿಸಿದರು. ಅಧ್ಯಕ್ಷರು ಮಾತನಾಡಿ, ಹೋಬಳಿಗೊಂದು ಸಮುದಾಯ ಆರೋಗ್ಯ ಕೇಂದ್ರ ನಿರ್ಮಿಸಿ. ದಣ ಜಿಲ್ಲೆಗಳಿಗೆ ಇಲ್ಲದ ನಿಯಮ ನಮ್ಮ ಜಿಲ್ಲೆಗೆ ಏಕೆ ? ನೀವು ಮೊದಲ ಪ್ರಸ್ತಾವನೆ ಸಲ್ಲಿಸಿ. ನಾವು ಮುಂದಿನದನ್ನು ನೋಡಿಕೊಳ್ಳುತ್ತೇವೆಂದು ಸೂಚಿಸಿದರು. ತಾವರಗೇರಾ, ಹುಲಿಹೈದರ, ಸಿದ್ದಾಪುರ ಸೇರಿ ಎಲ್ಲೆಲ್ಲಿ ಅಗತ್ಯ ಇದೆ ಅಲ್ಲೆಲ್ಲ ಪ್ರಸ್ತಾವನೆ ಸಲ್ಲಿಸಿ ಎಂದರು. ಬಸಾಪಟ್ಟಣ, ಆನೆಗೊಂದಿ ಆಸ್ಪತ್ರೆ ಅಭಿವೃದ್ಧಿಗೆ ಶಾಸಕ ಜನಾರ್ದನ ರೆಡ್ಡಿ ಒತ್ತಾಯಿಸಿದರು.
ಜಂಟಿ ಕೃಷಿ ನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ಕೃಷಿಹೊಂಡ, ಯಂತ್ರಧಾರೆ ವಿತರಿಸಲಾಗಿದೆ ಎಂದರು. ಎಲ್ಲ ಕ್ಷೇತ್ರಕ್ಕೆ ಬೇಡಿಕೆಗೆ ತಕ್ಕಂತೆ ಹೊಂಡ ಹಂಚಿ. ನೀರಾವರಿ ಭಾಗಕ್ಕೆ ಕಡಿಮೆ ನೀಡಿ. ಒಣಬೇಸಾಯ ಭಾಗಕ್ಕೆ ಆದ್ಯತೆ ಕೊಡಿ ಎಂದು ಸಚಿವರು ನಿರ್ದೇಶಿಸಿದರು. ಅಧಿಕಾರಿಗಳು ರೈತರ ಬೇಡಿಕೆ ಅನುಸಾರ ಹೊಂಡಕ್ಕೆ ಪ್ರಸ್ತಾವನೆ ಸಲ್ಲಿಸಲ್ಲ. 376ರ ಗುರಿ ಪೈಕಿ ಹೆಚ್ಚುವರಿ 800 ಹೊಂಡಕ್ಕೆ ಬೇಡಿಕೆ ನೀಡಿದ್ದಾರೆ. ಮೂರು ಸಾವಿರ ಮಾಡುವಂತೆ ಶಾಸಕ ರಾವೇಂದ್ರ ಹಿಟ್ನಾಳ ಆಗ್ರಹಿಸಿದರು.
ತೋಟಗಾರಿಕೆಗೆ ಜಿಲ್ಲೆಯಲ್ಲಿ ಪೂರಕ ವಾತಾವರಣ ಇದೆ. ಕ್ಷೇತ್ರ ಹೆಚ್ಚಿಸಿ. ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಹಾಸ್ಟೆಲ್ ಬೇಡಿಕೆ ಪಟ್ಟಿ ಸಲ್ಲಿಸಿ. ಹೊಸದಾಗಿ 150 ಹಾಸ್ಟೆಲ್ ಮಂಜೂರು ಮಾಡುವ ಯೋಜನೆ ಇದೆ. ಅಂಜನಾದ್ರ ಅಭಿವೃದ್ಧಿಗೆ ಇರುವ ಅಡ್ಡಿಗಳನ್ನು ಸರಿಪಡಿಸಿ. ಚಿಕ್ಕಸೂಳಿಕೇರಿ ಕರಡಿ ಸಂರತ ಪ್ರದೇಶ ಅಭಿವೃದ್ಧಿಗೆ ಕ್ರಮವಹಿಸಿ ಎಂದು ಸಚಿವರು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಕೆಡಿಪಿ ಸದಸ್ಯರಾದ ರವಿ ಕುರುಗೋಡ, ಹನುಮಂತಗೌಡ ಚಂಡೂರು, ರೆಡ್ಡಿ ಶ್ರೀನಿವಾಸ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ.ಮೋಹನ್ರಾಜ್, ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ, ಡಿಎ್ಒ ನಿರ್ಮಲಾ, ಎಡಿಸಿ ಸಿದ್ರಾಮೇಶ್ವರ, ಜಿಪಂ ಡಿಎಸ್ ಟಿ. ಕೃಷ್ಣಮೂರ್ತಿ ಇತರರಿದ್ದರು.
ನಮ್ಮಲ್ಲಿ ಏಳು ತಾಲೂಕುಗಳಿವೆ
ಅಧಿಕಾರಿಗಳು ಮಾಹಿತಿ ನೀಡುವಾಗ ಕೇವಲ ನಾಲ್ಕು ತಾಲೂಕಗಳೆಂದು ನೀಡುತ್ತೀರಿ. ನಮ್ಮಲ್ಲಿ ಏಳು ತಾಲೂಕುಗಳಿವೆ. ಕಾರಟಗಿ, ಕನಕಗಿರಿ, ಕುಕನೂರು ತಾಲೂಕುಗಳಾಗಿ ಏಳೆಂಟು ವರ್ಷಗಳಾಗಿವೆ. ಅವು ಅಧಿಕೃತ ತಾಲೂಕು ಹೌದಾ, ಅಲ್ಲವಾ ಎಂಬ ಅನುಮಾನ ಇದೆಯಾ ಎಂದು ಸಚಿವ ಶಿವರಾಜ ತಂಗಡಗಿ ಖಾರವಾಗಿ ಪ್ರಶ್ನಿಸಿದರು. ಹಿಂದೆಯೂ ಅನೇಕ ಬಾರಿ ಸೂಚಿಸಿದರೂ ಹಳೇ ಚಾಳಿ ಮುಂದುವರೆಸಿದ್ದೀರಿ. ಮುಂದಿನ ಸಭೆಯೊಳಗೆ ಎಲ್ಲ ತಾಲೂಕುಗಳ ಮಾಹಿತಿ ಬಿಡಿ ಬಿಡಿಯಾಗಿ ನೀಡಬೇಕೆಂದು ತಾಕೀತು ಮಾಡಿದರು.
ಕಿಮ್ಸ್ ಅಧಿಕಾರಿಗಳಿಗೆ ತರಾಟೆ
ಜಿಲ್ಲಾಸ್ಪತ್ರೆಯಲ್ಲಿ ಸ್ವಚ್ಛತೆ ಇಲ್ಲ. ರೋಗಿಗಳಿಗೆ ಹೊರಗೆ ಔಷಧ ತರಲು ಸೂಚಿಸುತ್ತಾರೆ. ಹೆಚ್ಚುವರಿ ಕೌಂಟರ್ ಇಲ್ಲವೆಂದು ವಿಪ ಸದಸ್ಯೆ ಹೇಮಲತಾ ನಾಯಕ ಪ್ರಶ್ನಿಸಿದರು. ಕಿಮ್ಸ್ ನಿರ್ದೇಶಕ ಡಾ.ವಿಜಯನಾಥ ಇಟಗಿ, ನಮ್ಮಲ್ಲಿ ಅಗತ್ಯ ಔಷಧ ಇವೆ. ಖಾಲಿ ಆಗಿದ್ದಲ್ಲಿ ನಿತ್ಯ 10 ಸಾವಿರ ರೂ.ವರೆಗೆ ಔಷಧ ಖರೀದಿಗೆ ಅವಕಾಶವಿದೆ ಎಂದರು. ಕೋಟ್ಯಂತರ ರೂ. ಖರ್ಚು ಮಾಡಿದರೂ ಸ್ವಚ್ಛತೆ ಇಲ್ಲವೆಂದು ಶಾಸಕ ಹಿಟ್ನಾಳ ಗರಂ ಆದರು. ಮಕ್ಕಳಿಗೆ ಡಯಾಲಿಸೀಸ್ ಮಾಡದೇ ವಾಪಸ್ ಕಳಿಸಿದ್ದಾರೆಂದು ಕುಷ್ಟಗಿ ಶಾಸಕ ದೊಡ್ಡನಗೌಡ ಆರೋಪಿಸಿದರು. ನಿಮ್ಮದು ಅತಿಯಾಗಿದೆ. ತಕ್ಷಣ ಸುಧಾರಿಸಿಕೊಳ್ಳಿ. ಇಲ್ಲದಿದ್ದರೆ ಶಿಸ್ತುಕ್ರಮ ಎದುರಿಸಬೇಕಾಗುತ್ತದೆಂದು ಸಚಿವರು ಖಡಕ್ ಎಚ್ಚರಿಕೆ ನೀಡಿದರು.