ಶ್ರೀನಿವಾಸ ಕಲ್ಯಾಣೋತ್ಸವ ಅದ್ದೂರಿ

ಕನಕಗಿರಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ನಿಮಿತ್ತ ಶ್ರೀದೇವಿ-ಭೂದೇವಿಯರೊಂದಿಗೆ ಶ್ರೀನಿವಾಸ ದೇವರ ಉತ್ಸವ ಜರುಗಿತು.
ಕನಕಗಿರಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ನಿಮಿತ್ತ ಶ್ರೀದೇವಿ-ಭೂದೇವಿಯರೊಂದಿಗೆ ಶ್ರೀನಿವಾಸ ದೇವರ ಉತ್ಸವ ಜರುಗಿತು.
Published on

ಪ್ರಮುಖ ಮುಖ್ಯಾಂಶಗಳು

  • ದೇಗುಲದಲ್ಲಿ ಮೊಳಗಿದ ಗೋವಿಂದ ನಾಮಸ್ಮರಣೆ
  • ಕನಕಗಿರಿಯಲ್ಲಿ ಧಾರ್ಮಿಕ ಸಂಭ್ರಮ
ಕನಕಗಿರಿ: ಇಲ್ಲಿನ ಶ್ರೀ ಕನಕಾಚಲ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ನರಸಿಂಹ ಜಯಂತಿ ನಿಮಿತ್ತ ಗುರುವಾರ ಶ್ರೀನಿವಾಸ ಕಲ್ಯಾಣೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
ಜಯಂತಿ ನಿಮಿತ್ತ ಶ್ರೀ ಕನಕಾಚಲಪತಿಗೆ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಅರ್ಚಕ ಮಧುರ ಕವಿ ನೇತೃತ್ವದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಜರುಗಿತು. ಹಲವು ಭಕ್ತ ಕುಟುಂಬಗಳು ಕಲ್ಯಾಣೋತ್ಸವದಲ್ಲಿ ಭಾಗವಹಿಸಿ ತೀರ್ಥ ಪ್ರಸಾದ ಸ್ವೀಕರಿಸಿದವು.ಬಳಿಕ ಶ್ರೀದೇವಿ ಹಾಗೂ ಭೂದೇವಿಯೊಂದಿಗೆ ಶ್ರೀನಿವಾಸ ದೇವರ ಉತ್ಸವ ಮೂರ್ತಿಯನ್ನು ಭಕ್ತರು ದೇವಸ್ಥಾನ ಆವರಣದಲ್ಲಿ ಮೂರು ಸುತ್ತು ಪ್ರದಕ್ಷಿಣೆ ಮಾಡಿಸಿದರು. ಈ ಸಂದರ್ಭದಲ್ಲಿ ‘ಗೋವಿಂದಾ ಗೋವಿಂದಾ’ ನಾಮಸ್ಮರಣೆ ಮೊಳಗಿತು. ದೇವಸ್ಥಾನದಲ್ಲಿ ಇದೇ ಮೊದಲ ಬಾರಿಗೆ ನಡೆದ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಸಿರಗುಪ್ಪ ತಾಲೂಕಿನ ಗೆಜ್ಜೆಹಾಳ ಗ್ರಾಮದ ಪುರಂದರದಾಸರ ಭಜನಾ ಮಂಡಳಿಯ ದಾಸ ಸಾಹಿತ್ಯ ಗಾಯನ ಎಲ್ಲರ ಗಮನ ಸೆಳೆಯಿತು.
ತಹಸೀಲ್ದಾರ್ ವಿಶ್ವನಾಥ ಮುರುಡಿ, ಶಿರಸ್ತೇದಾರರಾದ ಅನಿತಾ ಇಂಡಿ, ಸುನೀಲ್ ಕುಮಾರ್, ಪ್ರಮುಖರಾದ ಶಿವಪ್ರಕಾಶ್ ಗುಗ್ಗಳಶೆಟ್ಟರ್, ಶ್ರೀಶೈಲ ಪಾಟೀಲ್, ಗುಂಡಪ್ಪ ಚಿತ್ರಗಾರ, ಸುದರ್ಶನ ರೆಡ್ಡಿ, ಶ್ರೀನಿವಾಸ ರೆಡ್ಡಿ ಓಣಿಮನಿ, ಅರ್ಚಕರಾದ ವಿಜಯ ಪ್ರಸಾದ್, ಸಿಂಗರಾಚಾರ್ಯ, ದೇವಸ್ಥಾನ ಕಾರ್ಯದರ್ಶಿ ಸಿದ್ದಲಿಂಗಯ್ಯ ಸ್ವಾಮಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net