ಶ್ರೀನಿವಾಸ ಕಲ್ಯಾಣೋತ್ಸವ ಅದ್ದೂರಿ

ಗಂಗಾವತಿ ಶ್ರೀ ಸತ್ಯನಾರಾಯಣ ದೇವಾಲಯ ಆವರಣದಲ್ಲಿ ಲೋಕಕಲ್ಯಾಣಾರ್ಥ ಹುಬ್ಬಳ್ಳಿಯ ಮಧ್ವಭಾರತಿ ವೃಂದದಿಂದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಶನಿವಾರ ಜರುಗಿತು.
ಗಂಗಾವತಿ ಶ್ರೀ ಸತ್ಯನಾರಾಯಣ ದೇವಾಲಯ ಆವರಣದಲ್ಲಿ ಲೋಕಕಲ್ಯಾಣಾರ್ಥ ಹುಬ್ಬಳ್ಳಿಯ ಮಧ್ವಭಾರತಿ ವೃಂದದಿಂದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಶನಿವಾರ ಜರುಗಿತು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಸತ್ಯನಾರಾಯಣ ದೇವಾಲಯ ಆವರಣದಲ್ಲಿ ಆಯೋಜನೆ
ಗಂಗಾವತಿ: ನಗರದ ಸತ್ಯನಾರಾಯಣ ಪೇಟೆಯ ಶ್ರೀ ಸತ್ಯನಾರಾಯಣ ದೇವಾಲಯ ಆವರಣದಲ್ಲಿ ಲೋಕಕಲ್ಯಾಣಾರ್ಥ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಶನಿವಾರ ಜರುಗಿತು.
ಪೇಜಾವರ ಆಧೋಕ್ಷಜ ಮಠದ ಮತ್ತು ಹುಬ್ಬಳ್ಳಿಯ ಮಧ್ವಭಾರತಿ ವೃಂದದಿಂದ ಹಮ್ಮಿಕೊಂಡಿದ್ದು, ಶ್ರೀ ಸತ್ಯದೇವೇಶ ಮಹಿಳಾ ಭಜನಾ ಮಂಡಳಿ ಸಹಯೋಗದಲ್ಲಿ ಅದ್ದೂರಿಯಾಗಿ ನೆರವೇರಿಸಲಾಯಿತು. ದೇವಾಲಯದಲ್ಲಿನ ಪರಿವಾರದ ಮೂರ್ತಿಗಳಿಗೆ ಅಭಿಷೇಕ, ವಿಶೇಷ ಪೂಜೆ, ಹೂವಿನ ಅಲಂಕಾರ, ಮಹಿಳಾ ಭಜನಾ ಮಂಡಳಿಯಿಂದ ಭಜನೆ, ಕೋಲಾಟ ಪ್ರದರ್ಶನ ನೆರವೇರಿಸಲಾಯಿತು.
ನಂತರ ಶ್ರೀ ಲಕ್ಷ್ಮೀ, ಭೂದೇವಿ ಸಮೇತ ಶ್ರೀನಿವಾಸ ಮೂರ್ತಿಗಳನ್ನು ವಿಶೇಷ ಮೆರವಣಿಗೆ ಮೂಲಕ ಕಲ್ಯಾಣ ಮಂಟಪಕ್ಕೆ ಆಹ್ವಾನಿಸಿ, ವೈಭೋಗದಿಂದ ಸಂಪ್ರದಾಯದಬದ್ಧವಾಗಿ ಕಲ್ಯಾಣೋತ್ಸವ ನೆರವೇರಿಸಲಾಯಿತು.
ದೇವಾಲಯದ ವ್ಯವಸ್ಥಾಪಕ ವಾದಿರಾಜಾಚಾರ್ ಕಲ್ಮಂಗಿ ಮಾತನಾಡಿ, ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಆಜ್ಞಾನುಸಾರ ಕಲ್ಯಾಣೋತ್ಸವ ಹಮ್ಮಿಕೊಂಡಿದ್ದು, ಎಲ್ಲ ಸಮುದಾಯದ ಮುಖಂಡರು ಭಾಗವಹಿಸಿದ್ದಾರೆ ಎಂದರು.
ಪೌರೋಹಿತ್ಯವಹಿಸಿದ್ದ ರಾಘವೇಂದ್ರಾಚಾರ್ ಹೊಸಳ್ಳಿ, ಭಾರತೀ ರಾಘವೇಂದ್ರಚಾರ್ ಅವರು ಕಲ್ಯಾಣೋತ್ಸವ ಕುರಿತು
ಮಾಹಿತಿ ನೀಡಿದರು. ದೇವಾಲಯದ ಮುಖ್ಯಸ್ಥ ಲಕ್ಷ್ಮೀ ನಾರಾಯಣ ಶ್ರೇಷ್ಟಿ, ವಿಚಾರಣ ಕರ್ತ ಮೇಗೂರ ರಾಘವೇಂದ್ರರಾವ್, ಅರ್ಚಕ ಶ್ರೀಧರಾಚಾರ್ ರಾಜಪುರೋಹಿತ್, ಆರ್ಯವೈಶ್ಯ ಸಮಾಜದ ಮುಖಂಡರಾದ ದರೋಜಿ ಶ್ರೀರಂಗ ಶ್ರೇಷ್ಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net