ಜಿಲ್ಲೆಯಾದ್ಯಂತ ಶ್ರೀರಾಮ ನವಮಿ ಸಡಗರ

ವಿಶೇಷವಾಗಿ ಅಲಂಕೃತಗೊಂಡ ಕೊಪ್ಪಳದ ಗದಗ ರಸ್ತೆಯಲ್ಲಿನ ಶ್ರೀ ರಾಮ ದೇವಸ್ಥಾನದಲ್ಲಿನ ಶ್ರೀ ರಾಮ, ಲಕ್ಷಣ ಮತ್ತು ಸೀತಾಮಾತೆಯರ ಮೂರ್ತಿಗಳು.
ವಿಶೇಷವಾಗಿ ಅಲಂಕೃತಗೊಂಡ ಕೊಪ್ಪಳದ ಗದಗ ರಸ್ತೆಯಲ್ಲಿನ ಶ್ರೀ ರಾಮ ದೇವಸ್ಥಾನದಲ್ಲಿನ ಶ್ರೀ ರಾಮ, ಲಕ್ಷಣ ಮತ್ತು ಸೀತಾಮಾತೆಯರ ಮೂರ್ತಿಗಳು.
Published on

ಪ್ರಮುಖ ಮುಖ್ಯಾಂಶಗಳು

  • ರಾಮ ಮಂದಿರಗಳಲ್ಲಿ ವಿಶೇಷ ಪೂಜೆ, ಅಲಂಕಾರ
ಕೊಪ್ಪಳ : ಜಿಲ್ಲೆಯಾದ್ಯಂತ ಶ್ರೀರಾಮ ನವಮಿಯನ್ನು ಅತ್ಯಂತ ಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು. ನಗರದ ಪ್ರಮುಖ ದೇವಸ್ಥಾನಗಳು ಸೇರಿದಂತೆ ತಾಲೂಕಿನಾದ್ಯಂತ ಶ್ರೀರಾಮನ ಜನ್ಮೋತ್ಸವದ ಅಂಗವಾಗಿ ವಿಶೇಷ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ನಗರದ ಐತಿಹಾಸಿಕ ಕೋಟೆ ಏರಿಯಾದಲ್ಲಿರುವ ಶ್ರೀ ರಾಮ ದೇವಸ್ಥಾನದಲ್ಲಿ ಬೆಳಗಿನ ಜಾವದಿಂದಲೇ ವಿಶೇಷ ವಿಧಿವಿಧಾನಗಳು ಆರಂಭವಾದವು. ಶ್ರೀರಾಮಚಂದ್ರನ ಮೂರ್ತಿಗೆ ಪಂಚಾಮೃತ ಅಭಿಷೇಕ ಹಾಗೂ ವಿವಿಧ ಪುಷ್ಪಗಳಿಂದ ಮನಮೋಹಕವಾಗಿ ಅಲಂಕಾರ ಮಾಡಲಾಗಿತ್ತು. ಅದೇ ರೀತಿ, ನಗರದ ಗದಗ ರಸ್ತೆಯಲ್ಲಿರುವ ಶ್ರೀ ರಾಮ ದೇವಸ್ಥಾನದಲ್ಲಿಯೂ ಹಬ್ಬದ ಸಂಭ್ರಮ ಮನೆಮಾಡಿತ್ತು. ಇಲ್ಲಿನ ಶ್ರೀ ರಾಮ, ಲಕ್ಷಣ ಮತ್ತು ಸೀತಾಮಾತೆಯರ ಮೂರ್ತಿಗಳಿಗೆ ವಿಶೇಷವಾಗಿ ಪೂಜೆ ಸಲ್ಲಿಸಿ, ಶ್ರದ್ಧಾಭಕ್ತಿಯಿಂದ ನಮಿಸಲಾಯಿತು. ಪೂಜೆಯ ನಂತರ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.
ಕೇವಲ ನಗರ ಪ್ರದೇಶವಷ್ಟೇ ಅಲ್ಲದೆ, ಕೊಪ್ಪಳ ತಾಲೂಕಿನ ವಿವಿಧ ಗ್ರಾಮಗಳಲ್ಲಿಯೂ ರಾಮ ನವಮಿಯ ಅಂಗವಾಗಿ ಭಜನೆ, ಕೀರ್ತನೆ ಹಾಗೂ ಪಲ್ಲಕ್ಕಿ ಉತ್ಸವಗಳನ್ನು ಹಮ್ಮಿಕೊಳ್ಳಲಾಗಿತ್ತು. ಯುವಕರು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜೈ ಶ್ರೀರಾಮ್​ ಘೋಷಣಗಳೊಂದಿಗೆ ಸಾಂಸತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net