ಕನಕಗಿರಿಯ ಶ್ರೀ ಕನಕಾಚಲಪತಿ ಲಕ್ಷ್ಮೀನರಸಿಂಹ ರಥೋತ್ಸವ ಅದ್ದೂರಿಯಾಗಿ ನೆರವೇರಿತು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶ್ರೀ ಕನಕಾಚಲಪತಿ
ಶ್ರೀ ಕನಕಾಚಲಪತಿ ರಥೋತ್ಸವ ಅದ್ದೂರಿ
ಕನಕಗಿರಿ: ಕಣ್ಣಿದ್ದವರು ಕನಕಗಿರಿ ಎನ್ನುವ ನಾಣ್ನುಡಿಯಂತೆ ಐತಿಹಾಸಿಕ ಹಾಗೂ ಧಾರ್ಮಿಕ ಪ್ರಸಿದ್ಧ ಶ್ರೀ ಕನಕಾಚಲಪತಿ ಜಾತ್ರೋತ್ಸವದ ನಿಮಿತ್ತ ಬುಧವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ರಥೋತ್ಸವ ಸಡಗರದಿಂದ ಜರುಗಿತು.
ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಮ ಹವನ ನೆಡೆದವು. ಮೂಲ ನಕ್ಷತ್ರದಲ್ಲಿ ಸಂಜೆ ರಥೋತ್ಸವ ಆರಂಭದಲ್ಲಿ ತೇರು ರಸ್ತೆ ಬಿಟ್ಟು ಪಕ್ಕಕ್ಕೆ ಸಾಗಿದ್ದರಿಂದ ಹಿಂದಕ್ಕೆ ಎಳೆದು ಸರಿಯಾಗಿ ಎಳೆಯಲಾಯಿತು. ನಂತರ ತೇರು ರಾಜಬೀದಿಯಲ್ಲಿ ಸರಾಗವಾಗಿ ಸಾಗಿತು.
ಸುವರ್ಣಗಿರಿ ಸಂಸ್ಥಾನ ವಿರಕ್ತಮಠದ ಡಾ.ಚನ್ನಮಲ್ಲ ಸ್ವಾಮೀಜಿ ರಥಕ್ಕೆ ಪೂಜೆ ಸಲ್ಲಿಸಿದರು. ಭಕ್ತರು ಗೋವಿಂದಾ ಗೋವಿಂದ ಎಂದು ನಾಮಸ್ಮರಣೆ ಮಾಡಿ ರಥಕ್ಕೆ ಉತ್ತುತ್ತಿ, ಬಾಳೆಹಣ್ಣು ಎಸೆದು ಭಕ್ತಿ ಅರ್ಪಿಸಿದರು. ಹಲವು ಕಡೆಗಳಲ್ಲಿ ಮಜ್ಜಿಗೆ, ನೀರು, ಪಾನಕ ವಿತರಿಸಲಾಯಿತು.
ದಾಸೋಹ ವ್ಯವಸ್ಥೆ: ಜಾತ್ರೆಗೆ ಆಗಮಿಸಿದ ಭಕ್ತರಿಗೆ ದೇವಸ್ಥಾನ ಸಮಿತಿಯಿಂದ ಮಂಗಳವಾರ ಹಾಗೂ ಬುಧವಾರ 2 ದಿನಗಳ ಕಾಲ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಭಕ್ತರು ಅನ್ನ, ಸಾಂಬರ್, ಹುಗ್ಗಿ ಸವಿದರು.
ವ್ಯವಸ್ಥಾಪನಾ ಸಮಿತಿ ನಿರ್ಧಾರ ವ್ಯರ್ಥ: ಪ್ರಸಕ್ತ ವರ್ಷದ ಜಾತ್ರೆಯಲ್ಲಿ ರಥಕ್ಕೆ ಬಾಳೆಹಣ್ಣು ಎಸೆಯುವುದನ್ನು ನಿಷೇಧಿಸುವ ಮೂಲಕ ಸ್ವಚ್ಛತೆ ಕಾಪಾಡಲು ವ್ಯವಸ್ಥಾಪನಾ ಸಮಿತಿ ನಿರ್ಧಾರ ಕೈಗೊಂಡಿತ್ತು. ಆದರೆ, ಜಾತ್ರೆಯಲ್ಲಿ ಯಾರೂ ಪಾಲಿಸಲಿಲ್ಲ. ಬಾಳೆಹಣ್ಣು ಮಾರಾಟ ಹಾಗೂ ಎಸೆಯುವುದು ಸಾಮಾನ್ಯವಾಗಿತ್ತು.